ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಯಲ್ಲಾಪುರ: ವೇಗದ ಬೈಕ್ ಚಾಲನೆ. ಕಾರಿಗೆ ಢಿಕ್ಕಿ ಹೊಡೆದು ಇಬ್ಬರ ದುರ್ಮರಣ. ಮತ್ತೋರ್ವ ಗಂಭೀರ

ಯಲ್ಲಾಪುರ: ವೇಗದ ಬೈಕ್ ಚಾಲನೆ. ಕಾರಿಗೆ ಢಿಕ್ಕಿ ಹೊಡೆದು ಇಬ್ಬರ ದುರ್ಮರಣ. ಮತ್ತೋರ್ವ ಗಂಭೀರ

Mon, 16 Oct 2023 04:06:44  Office Staff   SO News

ಯಲ್ಲಾಪುರ : ಪಟ್ಟಣದ ರಾ. ಹೆದ್ದಾರಿಯಲ್ಲಿ ನಿಂತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿ‌ ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ. 

ಅಪಘಾತದಲ್ಲಿ ಇನ್ನೋರ್ವ  ಗಾಯಗೊಂಡಿದ್ದಾನೆ.  ಪಟ್ಟಣದ ತಟಗಾರ ಅಡ್ಡ ರಸ್ತೆ ಬಳಿ‌ ಈ ಅಪಘಾತ ಸಂಭವಿಸಿದೆ.    ರಾಮನಕೊಪ್ಪದ ದರ್ಶನ  ಭಂಡಾರಿ (17),  ಹುಣಶೆಟ್ಟಿಕೊಪ್ಪದ ರಾಜೇಶ ಆಚಾರಿ (18) ಮೃತ ದುರ್ದೈವಿಗಳಾಗಿದ್ದಾರೆ. ಮಂಜುನಾಥ ನಗರದ ಜಾಬೀರ್ ಮಹಮ್ಮದ್ ಗೌಸ್ ಎಂಬಾತನಿಗೆ ಗಂಭೀರ ಗಾಯಗೊಂಡಿದ್ದು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. 

 ಅತಿವೇಗವಾಗಿ ಬೈಕ್ ಓಡಿಸಿದ್ದರಿಂದಲೇ ನಿಂತ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: