ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮೋಟಾರ್ ಬೈಕ್ ಅಪಘಾತ : ಬಾಲಕನ ಸಾವು

ಮೋಟಾರ್ ಬೈಕ್ ಅಪಘಾತ : ಬಾಲಕನ ಸಾವು

Mon, 07 Nov 2022 06:52:43  Office Staff   so news

ಭಟ್ಕಳ: ಚಲಿಸುತ್ತಿದ್ದ ಮೋಟಾರ್ ಬೈಕ್‌ ವೊಂದು ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಢಿಕ್ಕಿ ಹೊಡೆದು ಮುಗುಚಿ ಬಿದ್ದ ಪರಿಣಾಮವಾಗಿ ಹಿಂಬದಿಯ ಸವಾರ ಕುಸಿದು ಬಿದ್ದ ಸಾವನ್ನಪ್ಪಿರುವ ಪೈ ಇಲೆಕ್ಟಿಕಲ್ಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯ ಮೇಲೆ ನಡೆದಿದೆ.
ಮೃತ ಬಾಲಕನನ್ನು ತಾಲೂಕಿನ ಬಂದ‌ ರೋಡ್ 5ನೇ ಕ್ರಾಸ್
ಅಬ್ದುಲ್ಲಾ ತಂದೆ ಫೈಜ್ ಆಫ್ರಿಕಾ ಪ್ರಾಯ:14) ಎಂದು ಗುರುತಿಸಲಾಗಿದೆ. ಈತ ಶಿರಾಲಿಯ ಕಡೆಯಿಂದ ಭಟ್ಕಳ ಪಟ್ಟಣದೆಡೆಗೆ ಪ್ರಯಾಣಿಸುತ್ತಿದ್ದ ಎಂದು ತಿಳಿದು ಬಂದಿದೆ. ಅಪಘಾತ ಸ್ಥಳದಲ್ಲಿ ಕುಸಿದು ಬಿದ್ದಿದ್ದ ಬಾಲಕನನ್ನು ಜಾಲಿ ಕ್ರಾಸ್ ಲೈಫ್ ಕೇರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರ ಒಳಗೆ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಎಸ್‌ಐ ಹನುಮಂತ ಕುಡಗುಂಟಿ ಸಿಬ್ಬಂದಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಟ್ಕಳ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Share: