ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮೆಮು ರೈಲು ನಿಲುಗಡೆಗೆ ಆಗ್ರಹ. ಹಾರವಾಡದಲ್ಲಿ ರೈಲು ತಡೆದು ಪ್ರತಿಭಟನೆ

ಮೆಮು ರೈಲು ನಿಲುಗಡೆಗೆ ಆಗ್ರಹ. ಹಾರವಾಡದಲ್ಲಿ ರೈಲು ತಡೆದು ಪ್ರತಿಭಟನೆ

Tue, 17 Jan 2023 05:40:07  Office Staff   SO News

ಅಂಕೋಲಾ : ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಮೆಮು ರೈಲು ನಿಲುಗಡೆಗೆ ಆಗ್ರಹಿಸಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಹಾರವಾಡ ರೈಲ್ವೆ ನಿಲ್ದಾಣದಲ್ಲಿ ಸೋಮವಾದ ರೇಲ್ ರೋಖೋ ಪ್ರತಿಭಟನೆ ನಡೆಯಿತು. 

ಕಾರವಾರದ ಜನಶಕ್ತಿ ವೇದಿಕೆ ನೇತೃತ್ವದಲ್ಲಿ ನಡೆದ  ರೈಲ್ ರೋಖೋ ಪ್ರತಿಭಟನೆಯಲ್ಲಿ ಪದ್ಮಶ್ರೀ ಸುಕ್ರಿ ಗೌಡ ಮತ್ತು ತುಳಸಿ ಗೌಡ ಅವರು ಪಾಲ್ಗೊಂಡಿದ್ದರು. 

ಈ ಹಿಂದೆ ಓಡಾಡುತ್ತಿದ್ದ ಡೆಮೋ ರೈಲನ್ನ  ಮೆಮು ಆಗಿ ಪರಿವರ್ತಿಸಿದ್ದು, ರೈಲ್ವೆ ಮಂಗಳೂರಿನಿಂದ ಮಡಗಾಂಗೆ ಸಂಚರಿಸುತ್ತಿದೆ. ಆದರೆ  ಮೆಮು ರೈಲನ್ನ ಹಾರವಾಡ, ಮಿರ್ಜಾನ ಮತ್ತು ಚಿತ್ರಾಪುರದಲ್ಲಿ ನಿಲುಗಡೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

 ಹಾರವಾಡ ರೈಲ್ವೆ ಸ್ಟೇಶನನ್ನ ಪ್ರಯಾಣಿಕರ ದೃಷ್ಟಿಯಿಂದ ಪ್ಲ್ಯಾಟ್ ಪಾರ್ಮ್ ನ್ನ ಎತ್ತರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸತೀಶ್ ಸೈಲ್, ರೈಲ್ವೆ ಸಮಿತಿಯ ರಾಜೀವ ಗಾಂವಕರ, ಜಾರ್ಜ್ ಫರ್ನಾಂಡೀಸ್, ಸೇರಿದಂತೆ ಇತರರು ಹಾಜರಿದ್ದರು.

ಈ ಸಂದರ್ಭದಲ್ಲಿ ಆರ್ಆರ್ಎಂ ಬಿ ಬಿ ಬಿ ನಿಕ್ಕಂಗೆ ಮನವಿ ಸಲ್ಲಿಸಿದರು. ಇನ್ನೂ ಹತ್ತು ದಿನದೊಳಗೆ  ಬೇಡಿಕೆ ಈಡೇರಿಸುವ ಭರವಸೆ ನೀಡಿದರು.


Share: