ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರ್ಡೇಶ್ವರ : ಕಡಲತೀರದಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ ಲೈಪ್ ಗಾರ್ಡ್ ಸಿಬ್ಬಂದಿಗಳು‌

ಮುರ್ಡೇಶ್ವರ : ಕಡಲತೀರದಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ ಲೈಪ್ ಗಾರ್ಡ್ ಸಿಬ್ಬಂದಿಗಳು‌

Mon, 23 Oct 2023 19:09:23  Office Staff   SO News

ಭಟ್ಕಳ : ಮುರ್ಡೇಶ್ವರ ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರನ್ನ ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.

ಬಾಗಲಕೋಟೆ ಮೂಲದ ಬಸವನಗೌಡ ಪಾಟೀಲ್(22), ಶರಣು ಇಂಚಲ್(21), ರವಿಚಂದ್ರನ್(22) ರಕ್ಷಣೆಗೊಳಗಾದ ಪ್ರವಾಸಿಗರು. ರಜೆಯ ಕಾರಣಕ್ಜಾಗಿ ಇವರು ಮುರ್ಡೇಶ್ವರ ಪ್ರವಾಸಕ್ಕೆ  ಬಂದಿದ್ದರು. ಬೆಳಿಗ್ಗೆ ಸಮುದ್ರ ತೀರದಲ್ಲಿ ಈಜಲು ಇಳಿದಿದ್ದರು. ನೀರಿನ ಸುಳಿಗೆ ಸಿಲುಕಿದಾಗ  ಕೂಡಲೇ ಲೈಫ್‌ಗಾರ್ಡ್  ಸಿಬ್ಬಂದಿಗಳಾದ ಶಶಿ, ಪಾಂಡು, ರಾಮಚಂದ್ರ ಎಂಬುವವರು ಧಾವಿಸಿ  ಪ್ರವಾಸಿಗರನ್ನ ರಕ್ಷಿಸಿದ್ದಾರೆ‌.

ಅಸ್ವಸ್ಥಗೊಂಡವರಿಗೆ ಲೈಪ್ ಗಾರ್ಡ್ ಸಿಬ್ಬಂದಿಗಳು ಸ್ಥಳದಲ್ಲೇ ಪ್ರಥಮಚಿಕಿತ್ಸೆ ನೀಡಿದ್ದಾರೆ. ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Share: