ಹೊಸದಿಲ್ಲಿ, ಅ.14 : ಅರುಣಾಚಲ ಪ್ರದೇಶದ ಮಾಲಕತ್ವದ ಬಗ್ಗೆ ಚೀನ ಹಾಗೂ ಭಾರತ ವಾಗ್ವಾದ ನಡೆಸಿದ ಒಂದು ದಿನದ ಬಳಿಕ, ಚೀನವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತನ್ನ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಭಾರತವಿಂದು ಹೇಳಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಯೋಜನೆಗಳಲ್ಲಿ ಚೀನ ತೊಡಗಿಕೊಂಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಭಾರತ-ಚೀನಗಳ ನಡುವಿನ ದೀರ್ಘಾವಧಿ ಬಾಂಧವ್ಯವನ್ನು ಅನುಲಕ್ಷಿಸಿ ಅಂತಹ ಚಟುವಟಿಕೆಗಳನ್ನು ನಿಲ್ಲಿಸುವಂತೆ ನೆರೆಯ ದೇಶಕ್ಕೆ ಎಚ್ಚರಿಕೆ ನೀಡಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ-ಚೀನ ಜಂಟಿಯೋಜನೆಗಳ ಕುರಿತಾದ ಪ್ರಶ್ನೆಯೊಂದಕ್ಕುತ್ತರಿಸಿದ ವಿದೇಶಾಂಗ ವಕ್ತಾರ ವಿಷ್ಣುಪ್ರಕಾಶ್, ಚೀನವು ಅಲ್ಲಿ ಪಾಕಿಸ್ತಾನದೊಂದಿಗೆ ಯೋಜನೆಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಲಿದೆಯೆಂಬ ಚೀನದ ಅಧ್ಯಕ್ಷ ಹು ಜಂಟಾವೊ ಹೇಳಿಕೆಯನ್ನುಲ್ಲೇಖಿಸಿರುವ ‘ಕ್ಸಿನುವಾ’ ವರದಿಯನ್ನು ತಾವು ಗಮನಿಸಿದ್ದೇವೆ ಎಂದಿದ್ದಾರೆ.
ಪಾಕಿಸ್ತಾನವು ಜಮ್ಮು-ಕಾಶ್ಮೀರದ ಭಾಗವನ್ನು ೧೯೪೭ರಿಂದಲೇ ಕಾನೂನು ಬಾಹಿರವಾಗಿ ತನ್ನ ವಶದಲ್ಲಿರಿಸಿಕೊಂಡಿದೆ. ಚೀನಕ್ಕೆ ಈ ಬಗ್ಗೆ ಭಾರತದ ನಿಲುವೇನೆಂಬುದು ಸಂಪೂರ್ಣ ತಿಳಿದಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನದ ಚಟುವಟಿಕೆಗಳ ಕುರಿತು ಭಾರತದ ಕಳವಳದ ಅರಿವೂ ಅದಕ್ಕಿದೆ.
ಚೀನವು ಉಭಯ ದೇಶಗಳ ದೀರ್ಘ ಕಾಲೀನ ಬಾಂಧವ್ಯವನ್ನು ಗಮನದಲ್ಲಿರಿಸಿ ಅಂತಹ ಚಟುವಟಿಕೆಗಳನ್ನು ನಿಲ್ಲಿಸುವುದಾಗಿ ತಾವು ಆಶಿಸುತ್ತೇವೆ ಎಂದು ವಿಷ್ಣುಪ್ರಕಾಶ್ ಹೇಳಿದ್ದಾರೆ.
ಚೀನದ ಅಧ್ಯಕ್ಷ ಜಿಂಟಾವೊ ಮಂಗಳವಾರ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ Uಲಾನಿಯವರೊಂದಿಗೆ ನಡೆಸಿದ ಸಭೆಯೊಂದರಲ್ಲಿ ಉಭಯ ದೇಶಗಳನ್ನು ಸಂಪರ್ಕಿಸುವ ಕಾರಾಕೊರಂ ಹೆದ್ದಾರಿ ಉನ್ನತೀಕರಣ ಹಾಗೂ ನೀಲಂ-ಝೀಲಂ ಜಲವಿದ್ಯುತ್ ಯೋಜನೆಗಳಿಗೆ ನೆರವು ನೀಡುವುದಾಗಿ ಹೇಳಿದ್ದರು.
ಅಂತಾರಾಷ್ಟ್ರೀಯ ಪರಿಸ್ಥಿತಿ ಎಷ್ಟೇ ಬದಲಾವಣೆಯಾಗಿದ್ದರೂ, ಚೀನ ಹಾಗೂ ಪಾಕಿಸ್ತಾನದ ಜನರು ಹೃದಯ ಹಾಗೂ ಕೈಗಳಿಂದ ಒಟ್ಟಾಗಿದ್ದಾರೆಂದು ಜಿಂಟಾವೊ ನುಡಿದಿದ್ದರು.