ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರ್ಡೇಶ್ವರ ಲಾಡ್ಜ್ ನಲ್ಲಿ ನಡೆಯುತ್ತಿದ್ದ ವೇಶ್ಯವಾಟಿಕೆ ಮೇಲೆ ದಾಳಿ: ಇಬ್ಬರು ಯುವತಿಯರ ರಕ್ಷಣೆ

ಮುರ್ಡೇಶ್ವರ ಲಾಡ್ಜ್ ನಲ್ಲಿ ನಡೆಯುತ್ತಿದ್ದ ವೇಶ್ಯವಾಟಿಕೆ ಮೇಲೆ ದಾಳಿ: ಇಬ್ಬರು ಯುವತಿಯರ ರಕ್ಷಣೆ

Tue, 20 Sep 2022 06:53:44  Office Staff   so news

ಭಟ್ಕಳ:ಮುರ್ಡೇಶ್ವರ ಲಾಡ್ಜ್ ಒಂದರಲ್ಲಿ ವೇಶ್ಯವಾಟಿಕೆ ದಂದೆ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಖಚಿತ ಮಾಹಿತಿಯನ್ನು ತಿಳಿದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಮಹಾಬಲೇಶ್ವರ ನಾಯ್ಕ ಹಾಗೂ ಮುರ್ಡೇಶ್ವರ ಠಾಣೆ ಪಿ.ಎಸೈ ಪರಮಾನಂದ ಕೊಣ್ಣೂರು ನೇತೃತ್ವ ದಲ್ಲಿ ಶಿವಕೃಪಾ ಲಾಡ್ಜ್ ಮೇಲೆ ದಾಳಿ ನಡೆಸಿ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ವೇಶ್ಯವಾಟಿಕೆ ದಂದೆಯ ನಡೆಸುತ್ತಿದ್ದ ಆರೋಪಿಗಳಾದ ನಾಗರಾಜ ತಂದೆ ಮಂಜುನಾಥ ಮೊಗೇರ,ಮಂಕಿ ನಿವಾಸಿ
ಮತ್ತು ಮಯೂರ ತಂದೆ ಸುರೇಶ ಮುರ್ಡೇಶ್ವರ,ಮಾವಳ್ಳಿ-2 ನಿವಾಸಿ ಇಬ್ಬರನ್ನು ಬದಿಸಿದ್ದು ಹಾಗೂ ಇನ್ನೂ ಉಳಿದ 

ಆರೋಪಿ ಕಟ್ಟಡ ಮಾಲಿಕ ಶಿವಪ್ರಸಾದ ರಾವ್ ತಂದೆ ರಾಮರಾವ್,ಮುರ್ಡೇಶ್ವರ ಮಾವಳ್ಳಿ-2,ನಿವಾಸಿ ತಲೆ ಮೇರಿಸಿ ಕೊಂಡಿದ್ದಾನೆ. 

ಈ ಮೂರು ಜನ ಸೇರಿ ಬೆಂಗಳೂರ ಹಾಗೂಹಾಸನ ಮೂಲದ 28 ಮತ್ತು 34 ವರ್ಷದ  ಇಬ್ಬರು ಮಹಿಳೆರನ್ನು ಶಿವಕೃಪಾ ಲಾಡ್ಜ್ಬಗೆ ಕರೆತಂದು ವೇಶ್ಯವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದ್ದು ಗಿರಾಕಿಗಳಿಂದ ಬಂದ ಅಣವನ್ನು ಪಡೆದುಕೊಂಡು ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದು ದಾಳಿ ನಡೆಸಿದ ಪೊಲೀಸರು ಇಬ್ಬರು ರಕ್ಷಣೆ ಮಾಡಿ ಕಾರವಾರ ಮಹಿಳಾ ಸಾಂತ್ವನ ಕೆಂದ್ರ ಕ್ಕೆ ಕಳಿಸಿದ್ದಾರೆ.

ಈ ಬಗ್ಗೆ ಮುರ್ಡೇಶ್ವರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: