ಭಟ್ಕಳ:ತಾಲ್ಲೂಕಿನ ಕಾಯ್ಕಿಣಿ ಮಠದಹಿತ್ಲ ನಲ್ಲಿ ಸೋಮವಾರ ರಾತ್ರಿ ಮನೆ ಹಿಂಬದಿಯ ಮೇಲ್ಚಾವಣಿಯ ಹಂಚು ಸರಿಸಿ ಕೋಣೆಯ ಒಳನುಗ್ಗಿದ ಕಳ್ಳರು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಇಟ್ಟಿದ್ದ ಗೋದ್ರೆಜ್ ಕಪಾಟನ ಚಾವಿ ಉಪಯೋಗಿಸಿ ಚಿನ್ನಾಭರಣ,ಹಾಗೂ ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ.
2 ಲಕ್ಷ್ಮೀ ಸರ, 4 ಉಂಗುರ,1 ಚೈನ್,2500) ನಗದು ಹಣ,2 ಪಾನ್ ಕಾರ್ಡ,2 ಆಧಾರ್ ಕಾರ್ಡ,3 ಎಟಿಎಮ್ ಕಾರ್ಡ,ಚಾಲನ ಪ್ರಮಾಣ ಪತ್ರ,ಮತ್ತು ಬೈಕ್ ದಾಖಲಾತಿಗಳು ದೋಚಿ ಪರಾರಿಯಾಗಿದ್ದಾರೆ.
117500 ರೂಪಾಯಿ ೪೭ ಗ್ರಾಂ ಬಂಗಾರ ಆಭರಣಗಳು ಆಗಿದ್ದು,ಹಾಗೂ ನಗದು 25000 ಸೇರಿ ಒಟ್ಟು 142500
ಇವುಗಳ ಒಟ್ಟೂ ಕಿಮ್ಮತ್ತು ಎಂದು ತಿಳಿಸಲಾಗಿದೆ.
ಈ ಕುರಿತು ಮುಡೇಶ್ವರ ಠಾಣೆಯಲ್ಲಿ ಶ್ರೀಮತಿ ದುರ್ಗಮ್ಮ ಜಟ್ಟಾ ಮೊಗೇರ್ ದೂರು ನೀಡಿದ್ದು ದೂರನ್ನು ಸ್ವೀಕರಿಸಿದ ಮುರ್ಡೇಶ್ವರ ಠಾಣೆಯ ಪಿಎಸೈ ದೇವರಾಜ್ ಎಸ್ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು ಕಾರವಾರದಿಂದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ