ಮಂಜೇಶ್ವರ, ನವೆಂಬರ್ ೫: ಮಂಜೇಶ್ವರ ಪಂಚಾಯತಿನ ವ್ಯಾಪ್ತಿಯಲ್ಲಿರುವ ತ್ಯಾಜ್ಯ ವಿಲೇವಾರಿಗೆ ಈ ತಿಂಗಳು ೧೫ ನೇ ತಾರೀಕಿನೊಳಗಾಗಿ ಸಮರ್ಪಕ ಕ್ರಮ ಕೈಗೊಲ್ಲದಿದ್ದಲ್ಲಿ ಜನರ ಸಹಕಾರದೊಂದಿಗೆ ಪಂಚಾಯತಿಗೆ ವಿರುದ್ದವಾಗಿ ಮಂಜೇಶ್ವರ ಗ್ರಾಹಕರ ವೇದಿಕೆಯು ಮುಷ್ಕರಕ್ಕೆ ಮುಂದಾಗುವುದಾಗಿ ಪಂಚಾಯತ್ ಅಧ್ಯಕ್ಷರೀಗೆ ನೋಟೀಸ್ ನೀಡಿರುತ್ತದೆ.
ಕಳೆದ ವರ್ಷ ಚಿಕನ್ ಗುನ್ಯಾ ರೀತಿಯ ಮಾರಕ ರೋಗಗಳು ಹರಡುವ ಭೀತಿಯನ್ನು ಮನಗಂಡು ಇದೇ ರೀತಿಯಾಗಿ ಒಂದು ವಾರದೊಳಗೆ ಮಂಜೇಶ್ವರ ಪ್ರದೇಶಗಳಲ್ಲಿ ನಾರುತ್ತಿರುವ ತ್ಯಾಜ್ಯವನ್ನು ತೆರವು ಗೊಳಿಸದಿದ್ದಲ್ಲಿ ಜನರ ಸಹಕಾರದೊಂದಿಗೆ ಮಂಜೇಶ್ವರ ಪ್ರದೇಶದ ತ್ಯಾಜ್ಯಗಳನ್ನು ಮಂಜೇಶ್ವರ ಗ್ರಾಹಕರ ವೇದಿಕೆಯ ನೇತೃತ್ವದಲ್ಲಿ ಪಂಚಾಯತ್ ಆವರಣದೊಳಗೆ ಹಾಕುವುದಾಗಿ ಎಚ್ಚರಿಕಾ ನೋಟೀಸ್ ನೀಡಿತ್ತು. ಇದಕ್ಕೆ ಸ್ಪಂದಿಸಿಸಿದ ಅಧ್ಯಕ್ಷರ ಗೈರು ಹಾಜರಿಯಲ್ಲಿ ಕಾರ್ಯವೆಸಗುತಿದ್ದ ಉಪಾಧ್ಯಕ್ಷರು ಕೆಲವು ಕಡೆಗಳಿಂದ ತ್ಯಾಜ್ಯವನ್ನು ತೆರವು ಗೊಳಿಸಲು ಸಹಕರಿಸಿದ್ದರು ಆದ್ರೆ ಪುನಃ ಈ ವರ್ಷವೂ ತ್ಯಾಜ್ಯ ವಿಲೇವಾರಿ ಮಾಡುವ ಕೆಲಸಕ್ಕೆ ಪಂಚಾಯತ್ ಆಡಳಿತ ಕೈ ಹಾಕಿಲ್ಲ.
ಮಂಗಲ್ಪಾಡಿಗೆ ಮಂಜೇಶ್ವರದ ತ್ಯಾಜ್ಯಗಳನ್ನು ಸ್ವೀಕರಿಸುವುದಿಲ್ಲ.ಅದೇರೀತಿ ತ್ಯಾಜವನ್ನು ಶೇಖರಿಸಲು ಪಂಚಾಯತ್ ಖರೀದಿಸಿದ ಮಚ್ಚಂಪಾಡಿಗೂ ತ್ಯಾಜ್ಯವನ್ನು ಕೊಂಡೊಯ್ಯದ ಪರಿಸ್ಥಿತಿ ಬಂದೊದಗಿದೆ ಹಾಗಿದ್ದರೆ ತ್ಯಾಜ್ಯವನ್ನು ನಾವು ಎಲ್ಲಿಗೆ ಕೊಂಡು ಹಾಕಬೇಕೆಂದು ಪಂಚಾಯತ್ ಅಧ್ಯಕ್ಷರು ವೇದಿಕೆಯ ಪಧಾಧಿಕಾರಿಗಳಲ್ಲಿ ಕೇಳಿದರೆನ್ನಲಾಗಿದೆ. ಅದು ತೀರ್ಮಾನಿಸುವುದು ವೇದಿಕೆಯಲ್ಲ ಮಂಜೇಶ್ವರ ಗ್ರಾಮ ಪಂಚಾಯತ್ ಆಗಿದೆಂಬ ವ್ಯಂಗ್ಯವಾದ ಉತ್ತರವನ್ನು ವೇದಿಕೆಯ ಪಧಾಧಿಕಾರಿಗಳು ನೀಡಿದರೆನ್ನಲಾಗಿದೆ. ಕಾಂಕ್ರೀಟ್ ನ ತೊಟ್ಟಿಯಲ್ಲಿರುವ ತ್ಯಾಜ್ಯ ವಸ್ತುಗಳ ದುರ್ನಾತದಿಂದ ಜನರು ಮೂಗು ಮುಚ್ಚಿಕೊಂಡು ನಡೆದಾಡ ಬೆಕಾದ ಪರಿಸ್ಥಿತಿ ಬಂದೊದಗಿದೆಂಬ ವೇದಿಕೆಯ ಹೇಳಿಕೆಗೆ ಪಂಚಾಯತ್ ಅಧ್ಯಕ್ಷರು ತೊಟ್ಟಿ ಇಟ್ಟದ್ದು ನಾವಲ್ಲ ನಮಗಿಂತ ಮೊದಲಿನ ಆಡಳಿತದವರು ಅದಕ್ಕೆ ನಾವು ಹೊಣೆಗಾರರಲ್ಲ ವೆಂಬ ಉತ್ತರ ನೀಡಿದರೆಂದು ಹೇಳಲಾಗಿದೆ.
ತ್ಯಾಜ್ಯ ವಿಲೇವಾರಿಯಲ್ಲಿ ವಿಫಲವಾದ ಮಂಜೇಶ್ವರ ಗ್ರಾಮ ಪಂಚಾಯತ್ ಅಧಿಕೃತರು ತಾವುಗಳು ನೀಡಿದ ನೋಟೀಸ್ ಗೆ ಸ್ಪಂಧಿಸದೇ ಇದ್ದಲ್ಲಿ ಜನರ ಸಹಕಾರದೊಂದಿಗೆ ಮುಷ್ಕರಕ್ಕೆ ಸಜ್ಜಾಗುವುದಾಗಿ ವೇದಿಕೆಯ ಪಧಾಧಿಕಾರಿಗಳು ತಿಳಿಸಿರುತ್ತಾರೆ.
ವರದಿ: ಅಬ್ದುಲ್ ರಹಮಾನ್ ಉದ್ಯಾವರ