ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರ್ಡೇಶ್ವರ ಕಡಲತೀರದಲ್ಲಿ ಮತ್ತೆ ಓರ್ವ ಪ್ರವಾಸಿಗ ಸಾವು!

ಮುರ್ಡೇಶ್ವರ ಕಡಲತೀರದಲ್ಲಿ ಮತ್ತೆ ಓರ್ವ ಪ್ರವಾಸಿಗ ಸಾವು!

Mon, 20 Jun 2022 06:21:25  Office Staff   SO NEWS

ಭಟ್ಕಳ: ಮುರ್ಡೇಶ್ವರದ ಕಡಲಬ್ಬರಕ್ಕೆ ಪ್ರವಾಸಿಗನೋರ್ವ ಕೊಚ್ಚಿಕೊಂಡು ಹೋಗಿ ಮೃತ ಪಟ್ಟ ಘಟನೆ ರವಿವಾರ ಸಂಭವಿಸಿದೆ. 
ಮೃತನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಕಂಚುಕೋಟೆಯ ನಿವಾಸಿ ಮಹೇಶ ತಂದೆ ಶಿವಶಂಕರಪ್ಪ (33) ಎಂದು ಗುರುತಿಸಲಾಗಿದೆ. 
ಈತನು ಹಾಗೂ ಮಂಜುನಾಥ ಜಿ., ಮುಂತಾದವರು ಸೇರಿಕೊಂಡು ಕಾರಿನಲ್ಲಿ ಬಂದಿದ್ದು ಸಿಗಂದೂರು, ಜೋಗ ಫಾಲ್ಸ್ ಎಲ್ಲಾ ಪ್ರವಾಸ ಮುಗಿಸಿ ಮುರ್ಡೇಶ್ವರಕ್ಕೆ ಬಂದಿದ್ದರು. ರವಿವಾರ ಮುರ್ಡೇಶ್ವರ ಸಮುದ್ರದ ನೀರಿನಲ್ಲಿ ಆಟವಾಡುತ್ತಿರುವಾಗ ದೊಡ್ಡ ಅಲೆಯೊಂದು ಬಂದು ಮಹೇಶನನ್ನು ಕೊಚ್ಚಿಕೊಂಡು ಹೋಗಿದ್ದು ಸ್ವಲ್ಪ ಹೊತ್ತಿನಲ್ಲಿಯೇ ಮೀನುಗಾರರು ಆತನನ್ನು ರಕ್ಷಣೆ ಮಾಡಿದರಾದರೂ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮೃತ ಪಟ್ಟಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು  ಪರೀಕ್ಷಿಸಿ ಹೇಳಿದ್ದಾರೆ. ಆವರೊಂದಿಗೆ ಬಂದಿದ್ದ ಗಂಗಾಭವಾನಿ ಕೋಂ ಮಂಜುನಾಥ ಎನ್ನುವವರು ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದು ಸಬ್ ಇನ್ಸಪೆಕ್ಟರ್ ಪರಮಾನಂದ ಕೊಣ್ಣೂರು ಅವರು ಮುಂದಿನ ಕ್ರಮ ಜರುಗಿಸಿದ್ದಾರೆ


Share: