ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರ್ಡೇಶ್ವರ ಒಲಗ ಮಂಟಪದ ಮುಂಭಾಗದಲ್ಲಿ ಆರ್.ಎನ್. ಶೆಟ್ಟಿಯವರ ಪ್ರತಿಮೆಯನ್ನು ಅನಾವರಣ

ಮುರ್ಡೇಶ್ವರ ಒಲಗ ಮಂಟಪದ ಮುಂಭಾಗದಲ್ಲಿ ಆರ್.ಎನ್. ಶೆಟ್ಟಿಯವರ ಪ್ರತಿಮೆಯನ್ನು ಅನಾವರಣ

Tue, 06 Sep 2022 06:07:55  Office Staff   SO NEWS

ಭಟ್ಕಳ: ಮುರ್ಡೇಶ್ವರ ಒಲಗ ಮಂಟಪದ ಮುಂಭಾಗದಲ್ಲಿ ದಿವಂಗತ ಆರ್.ಎನ್. ಶೆಟ್ಟಿಯವರ ಪಂಚಲೋಹದ ಪ್ರತಿಮೆಯನ್ನು ಅನಾವರಣ ಗೊಳಿಸಲಾಗಿದೆ.

ಈ ಹಿಂದೆ ಮುರ್ಡೇಶ್ವರ ಶಿವನ ವಿಗ್ರಹದ ಮುಂಭಾಗದಲ್ಲಿರುವ ಕಂದುಕಗಿರಿಯಲ್ಲಿ ಸುಮಾರು 1,560 ಕೆಜೆ ತೂಕ ಹಾಗೂ 15 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಅದೇ ರೀತಿ ಈಗ ಒಲಗ ಮಂಟಪದ ಮುಂಭಾಗದಲ್ಲಿ ದಿವಂಗತ ಆರ್.ಎನ್. ಶೆಟ್ಟಿಯವರ ಪಂಚಲೋಹದ ಪ್ರತಿಮೆ ಅನಾವರಣ ಮಾಡಲಾಗಿದೆ
ಈ ಸಂದರ್ಭದಲ್ಲಿ ಆರ್.ಎನ್.ಶೆಟ್ಟಿ ಪುತ್ರ ಸತೀಶ್ ಶೆಟ್ಟಿ, ಶಾಸಕ ಸುನೀಲ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.


Share: