ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರುಡೇಶ್ವರ ಶಿಲ್ಪಿ ಕೇಶವ ನಾಯ್ಕ ಅವರಿಗೆ "ಶಿಲ್ಪಕಲಾ ರತ್ನ" ಪ್ರಶಸ್ತಿ

ಮುರುಡೇಶ್ವರ ಶಿಲ್ಪಿ ಕೇಶವ ನಾಯ್ಕ ಅವರಿಗೆ "ಶಿಲ್ಪಕಲಾ ರತ್ನ" ಪ್ರಶಸ್ತಿ

Wed, 20 Jul 2022 07:03:43  Office Staff   SO NEWS

ಭಟ್ಕಳ:ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕçತಿಕ ಪ್ರತಿಷ್ಠಾನ ಸಂಸ್ಥೆಯಿದ ಮುರುಡೇಶ್ವರ ಶಿಲ್ಪಿ ಕೇಶವ ನಾಯ್ಕ ಅವರಿಗೆ "ಶಿಲ್ಪಕಲಾ ರತ್ನ" ಪ್ರಶಸ್ತಿ ನೀಡಿ ಗೌರವಿಸಿದೆ.
 ಇತ್ತಿಚಿಗೆ ಬೆಂಗಳೂರಿನ ಕಂಠೀರವ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಉಚ್ಛನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅರಳಿನಾಗರಾಜ ಈ ಪ್ರಶಸ್ತಿ ಪ್ರಧಾನ ಮಾಡಿದರು. ಮುರುಡೇಶ್ವರದ ಚಂದ್ರಹಿತ್ಲ ನಿವಾಸಿಯಾದ ಕೇಶವ ನಾಯ್ಕ ಶಿಲ್ಪಕಲೆಯಲ್ಲಿ ತರಬೇತಿ ಪಡೆದು ಕಳೆದ 15 ವರ್ಷಗಳಿಂದ ಶಿಲ್ಪಕಲಾ ಕೆತ್ತನೆ ತೊಡಗಿಕೊಂಡಿದ್ದಾರೆ. ಮುರುಡೇಶ್ವರ ಕೊಡ್ಸಳು ಹಾಗೂ ಕಾರ್ಕಳದಲ್ಲಿ ಇವರ ಕೆತ್ತನೆ ಕಾರ್ಖಾನೆ ಇದೆ. ಹೊಯ್ಸಳ ಶೈಲಿಯ ಕೆತ್ತನೆಯಲ್ಲಿ ನಿಪುಣತೆ ಪಡೆದಿರುವ ಇವರು ಹತ್ತಾರು ದೇವಸ್ಥಾನಗಳ ನೂತನ ದೇವಾಲಯ ಗರ್ಭಗುಡಿ ಕೆತ್ತನೆ ಮಾಡಿ ಜನಪ್ರೀಯರಾಗಿದ್ದಾರೆ.
 ಇವರ ಈ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕçತಿಕ ಪ್ರತಿಷ್ಠಾನ ಈ ಪ್ರಶಸ್ತಿ ನೀಡಿ ಗೌರವಿಸಿದೆ.


Share: