ಮಂಗಳೂರು, ಡಿ.8: ಬಜ್ಪೆಯಿಂದ ಅಕ್ಟೋಬರ್ 25ರಂದು ಹಜ್ ಯಾತ್ರೆ ಕೈಗೊಂಡಿದ್ದ ಹಜ್ ಯಾತ್ರಿಗಳ ಪ್ರಥಮ ತಂಡವು ಕ್ಯಾಲಿಕಟ್ ಮೂಲಕ ಬಜ್ಪೆ ವಿಮಾನ ನಿಲ್ದಾಣಕ್ಕೆ ಇಂದು ಮಧ್ಯಾಹ್ನ ಆಗಮಿಸಿದೆ.
ವಿಮಾನ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಮುಹಮ್ಮದ್ ಗೌಸ್, ಹಜ್ ಕ್ಯಾಂಪ್ನ ಅಧ್ಯಕ್ಷ ಯೇನೆಪೋಯ ಮುಹಮ್ಮದ್ ಕುಂಞಿ, ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ನಿಯಾಝ್ ಅಹ್ಮದ್, ಹಜ್ ಕ್ಯಾಂಪ್ನ ಕಾರ್ಯದರ್ಶಿ ಎಸ್.ಎಂ. ರಶೀದ್ ಹಾಜಿ, ಉಪಾಧ್ಯಕ್ಷರಾದ ಅಝೀಝ್ ಬೈಕಂಪಾಡಿ, ಮೊಯ್ದಿನ್ ಬಾವ, ಎಂ.ಎಚ್. ಇಕ್ಬಾಲ್ ಉಪಸ್ಥಿತರಿದ್ದು ಹಜ್ ಯಾತ್ರಿಕರನ್ನು ಬರಮಾಡಿಕೊಂಡರು.
ಡಿ.13ರವರೆಗೆ ಪ್ರತಿದಿನ ಹಜ್ ಯಾತ್ರಿಕರ ವಿವಿಧ ತಂಡಗಳು ಆಗಮಿಸಲಿವೆ. ಪ್ರತಿದಿನ 1.45 ಕ್ಕೆ ವಿಮಾನ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ಮಂಗಳೂರು ಹಜ್ ಕ್ಯಾಂಪ್ನ ಅಧ್ಯಕ್ಷ ಯೇನೆಪೋಯ ಮುಹಮ್ಮದ್ ಕುಂಞಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.