ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುಂಬೈ - ಮಂಗಳೂರು ರೈಲಿನಲ್ಲಿ 2 ಕೋಟಿ ರೂ. ಹಣದೊಂದಿಗೆ ಸಿಕ್ಕಿಬಿದ್ದ ರಾಜಸ್ಥಾನಿ ಯುವಕ.

ಮುಂಬೈ - ಮಂಗಳೂರು ರೈಲಿನಲ್ಲಿ 2 ಕೋಟಿ ರೂ. ಹಣದೊಂದಿಗೆ ಸಿಕ್ಕಿಬಿದ್ದ ರಾಜಸ್ಥಾನಿ ಯುವಕ.

Fri, 10 Jun 2022 02:10:29  Office Staff   SO News

ಕಾರವಾರ : ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ಸಿಎಸ್ಎಂಟಿ ರೈಲಿನಲ್ಲಿ 2 ಕೋಟಿ ರೂ.  ಹಣ ಪತ್ತೆಯಾಗಿದೆ. 

ರಾಜಸ್ಥಾನ ಮೂಲದ ಯುವಕನೋರ್ವ ತನ್ನ ಬ್ಯಾಗಿನಲ್ಲಿ ಹಣವನ್ನ ಕೊಂಡೊಯ್ಯುತ್ತಿದ್ದ. ಆದರೆ ರೈಲು ಟಿಕೇಟ್ ಪಡೆಯದೇ ಸಂಚರಿಸುತ್ತಿರುವುದನ್ನ ಟಿಸಿ ಪತ್ತೆ ಹಚ್ಚಿ ದಂಡ ವಿಧಿಸಿದ್ದರು. ಮತ್ತೆ ಸಂಶಯ ಬಂದು ವಿಚಾರಿಸಿದಾಗ  ಹಣ ಇರೋದು ಗೊತ್ತಾಗಿದೆ
 
 ಚೇನಸಿಂಗ್ ಹೇಮಸಿಂಗ್ (22) ಬಂಧಿತ ಆರೋಪಿಯಾಗಿದ್ದಾನೆ. 

 ಕೊಂಕಣ ರೈಲ್ವೆ ವಿಚಕ್ಷಕ ದಳ ಅಧಿಕಾರಿಗೆ ಮಾಹಿತಿ ನೀಡಿದ್ರಿಂದ ಕಾರವಾರ ರೈಲ್ವೆ ನಿಲ್ದಾಣದಲ್ಲಿ 
 ರೈಲ್ವೆ ಪೊಲೀಸರು ಕಾರವಾರ ಗ್ರಾಮೀಣ ಠಾಣೆ ಪೊಲೀಸರಿಗೆ  ಯುವಕನ ಸಹಿತ ಹಣವನ್ನ ಹಸ್ತಾಂತರಿಸಿದ್ದಾರೆ.  ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಂಧಿತನ ತನಿಖೆ ನಡೆಸಿದ್ದಾರೆ. 

 ಬಂಧಿತನಿಂದ ಸಿಕ್ಕ ಹಣಕ್ಕೆ ಯಾವುದೇ ದಾಖಲೆ ಇರಲಿಲ್ಲ. ಮುಂಬೈನಿಂದ ಓರ್ವ ಕೊಟ್ಟು ಇದನ್ನ ಮಂಗಳೂರಿಗೆ ತಲುಪಿಸಿ ಬಾ ಎಂದು ಹೇಳಿದ್ದರಿಂದ ತಂದೆ ಎಂದು ಪೊಲೀಸರಿಗೆ ಹೇಳಿದ್ದಾನೆ.

ಆದರೆ ಇದು ಹವಾಲ ಹಣ ಅಥವಾ ಕದ್ದು ತಂದಿರಬಹುದೆಂಬ ಕಾರಣಕ್ಕೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ

  ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Share: