ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುಂದುವರಿದ ಮಳೆಯ ಆರ್ಭಟ. ನಾಳೆ ಜುಲೈ 25ರಂದು ಶಾಲಾಕಾಲೇಜುಗಳಿಗೆ ರಜೆ.

ಮುಂದುವರಿದ ಮಳೆಯ ಆರ್ಭಟ. ನಾಳೆ ಜುಲೈ 25ರಂದು ಶಾಲಾಕಾಲೇಜುಗಳಿಗೆ ರಜೆ.

Tue, 25 Jul 2023 04:06:55  Office Staff   SO News

ಕಾರವಾರ : ಜಿಲ್ಲೆಯಲ್ಲಿ ಬಾರೀ ಮಳೆ ಮುಂದುವರಿದ ಹಿನ್ನೆಲೆಯಲ್ಲಿ  ಶಾಲಾ ಕಾಲೇಜುಗಳ ರಜೆ ಮುಂದುವರಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ ಶೈಕ್ಷಣಿಕ ಜಿಲ್ಲೆಯ ಅಂಗನವಾಡಿಯಿಂದ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಕರಾವಳಿ, ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಹಲವೆಡೆ  ತಗ್ಗು ಪ್ರದೇಶಗಳು  ಜಲಾವೃತವಾಗಿದೆ. ಜುಲೈ 25ರಂದು ಮಳೆ ಮುಂದುವರಿಯುವ ಬಗ್ಗೆ ಹವಮಾನ ಇಲಾಖೆ ತಿಳಿಸಿದ್ದರಿಂದ  ಮುಂಜಾಗೃತೆಯಾಗಿ ರಜೆ ಮುಂದುವರಿಸಲಾಗಿದೆ‌.


Share: