ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮುಂಬೈ ಗುಂಡಿನ ಚಕಮಕಿ ೧೬ರ ಬಾಲೆ ಸಾವು

ಮುಂಬೈ ಗುಂಡಿನ ಚಕಮಕಿ ೧೬ರ ಬಾಲೆ ಸಾವು

Thu, 18 Mar 2010 11:03:00  Office Staff   S.O. News Service
ಮುಂಬೈ, ಮಾ. 18 : ಕ್ಷುಲಕ ಕಾರಣಕ್ಕಾಗಿ ಹದಿನಾರು ವರ್ಷದ ಬಾಲಕಿ ಹಾಗೂ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಮೂವರ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಘಟನೆ ಅಂಧೇರಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. 

ಹೆಮಿನಿ ಮೆಹ್ತಾ(16) ಮೃತಪಟ್ಟ ನತದೃಷ್ಟೆ. 65 ವರ್ಷದ ಹರೀಶ್ ಮರೋಲಿಯಾ ಗುಂಡಿನ ದಾಳಿ ನಡೆಸಿದ ಆರೋಪಿ ಎಂದು ಗುರುತಿಸಲಾಗಿದೆ. ಅಂಧೇರಿಯಲ್ಲಿರುವ ಸೌರಂಗ್ ಸೊಸೈಟಿ ಮೂರನೇ ಮಹಡಿಯಲ್ಲಿ ವಾಸವಾಗಿದ್ದ ಹರೀಶ್, ಹೆಮನಿ ಮೆಹ್ತಾ, ಸಬ್ ಇನ್ಸ್ ಪೆಕ್ಟರ್ ಮತ್ತು ಪೇದೆ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.
 
ತೀವ್ರ ಗಾಯಗೊಂಡಿದ್ದ ಹೇಮನಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದ್ದಾಳೆ. ಗಾಯಗೊಂಡಿರುವ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
 
ಸೌಜನ್ಯ:ದಟ್ಸ್ ಕನ್ನಡ 

Share: