ಬೆಳಗಾವಿ: ಪ್ರಸಕ್ತ ಸಾಲಿನಲ್ಲಿ ವರ್ಗಾವಣೆಗಾಗಿ ವೆಬ್ಸೈಟ್ ಮೂಲಕ ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ ಬಹುತೇಕ ಶಿಕ್ಷಕ/ಶಿಕ್ಷಕಿಯರು ಅದರ ಸ್ವೀಕೃತಿ ಪಡೆದು ಕೊಂಡಿದ್ದರೂ ಅರ್ಜಿಯನ್ನು ದೃಢೀಕರಿಸಿಕೊಂಡಿಲ್ಲ. ಅಂತಹ ಶಿಕ್ಷಕರು ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೈಲಹೊಂಗಲ ಇಲ್ಲಿ ಖುದ್ದಾಗಿ ಹಾಜರಾಗಿ ಅರ್ಜಿಯನ್ನು ದೃಢೀಕರಿಸಿಕೊಳ್ಳಬೇಕೆಂದು ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.