ಹುಬ್ಬಳ್ಳಿ ( ಕರ್ನಾಟಕ ವಾರ್ತೆ ) ಏ ೧೫ : ತಾಲೂಕಿನ ಗ್ರಾಮಾಂತರ ಪ್ರದೇಶದ ಅಂತ್ಯೋದಯ , ಅಕ್ಷಯ ಮತ್ತು ಎ. ಪಿ. ಎಲ್. ಕಾರ್ಡುದಾರರ ಭಾವಚಿತ್ರಗಳನ್ನು ( ಫೋಟೋ) ೨೦೦೭-೦೮ ನೇ ಸಾಲಿನಲ್ಲಿ ತೆಗೆಯಲಾಗಿದೆ . ಈ ಕಾರ್ಡುಗಳ ಭಾವಚಿತ್ರವುಳ್ಳ ಖಾಯಂ ( ಪ್ಲಾಸ್ಟಿಕ್ ) ಕಾರ್ಡುಗಳನ್ನು ಜೂನ್ ೨೦೦೯ ನೇ ತಿಂಗಳಿಂದ ಇಲ್ಲಿಯವರೆಗೆ ವಿತರಿಸಲಾಗುತ್ತಿದೆ . ಆದರೆ ಕೆಲವು ಕಾರ್ಡುದಾರರು ತಹಶೀಲ್ದಾರ ಕಚೇರಿಯಿಂದ ತಮ್ಮ ಕಾರ್ಡುಗಳನ್ನು ತೆಗೆದುಕೊಂಡು ಹೋಗಿರುವುದಿಲ್ಲ .
ಆದ್ದರಿಂದ ವಿವಿಧ ಪಡಿತರ ಕಾರ್ಡ್ ಪಡೆಯಲು ಭಾವಚಿತ್ರ ತೆಗೆಯಿಸಿರುವಂತಹವರು ಇದೇ ತಿಂಗಳ ದಿನಾಂಕ. ೨೦ ರೊಳಗಾಗಿ ತಹಶೀಲ್ದಾರ ಕಚೇರಿಯಿಂದ ತಮ್ಮ ಕಾರ್ಡುಗಳನ್ನು ತಗೆದುಕೊಂಡು ಹೋಗಬೇಕೆಂದು ಹುಬ್ಬಳ್ಳಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ಒಂದು ವೇಳೆ ಸಂಬಂಧಿಸಿದವರು ತಮ್ಮ ಪಡಿತರ ಕಾರ್ಡುಗಳನ್ನು ತೆಗೆದುಕೊಂಡು ಹೋಗದಿದ್ದರೆ ಅಂತಹ ಕಾರ್ಡುಗಳನ್ನು ಮೇ ೨೦೧೦ ರ ತಿಂಗಳಿನಿಂದ ರದ್ದುಪಡಿಸಿ ಪಡಿತರ ಆಹಾರ ಧಾನ್ಯಗಳನ್ನು ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸುವುದನ್ನು ತಡೆಹಿಡಿಯಲಾಗುವುದು ಎಂದು ತಹಶೀಲ್ದಾರರು ತಿಳಿಸಿದ್ದಾರೆ