ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುಂದಾಪುರ: ತೌರುಮನೆಯಿಂದ ಗಂಡನ ಮನೆಗೆ ಹೊರಟ ಮಹಿಳೆ ಕಾಣೆ

ಕುಂದಾಪುರ: ತೌರುಮನೆಯಿಂದ ಗಂಡನ ಮನೆಗೆ ಹೊರಟ ಮಹಿಳೆ ಕಾಣೆ

Wed, 07 Oct 2009 18:02:00  Office Staff   S.O. News Service
ಕುಂದಾಪುರ, ಅಕ್ಟೋಬರ್ 7: ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಬದ್ರುದ್ದೀನ್ ಎಂಬವರ ಮಗಳಾದ ಶ್ರೀಮತಿ ರಶಿದಾ ಭಾನು (25 ವರ್ಷ) ಎಂಬವರು ತನ್ನ ಎರಡು ಮಕ್ಕಳಾದ 6 ವರ್ಷದ ಸುಭಾನ್ ಹಾಗೂ 5 ವರ್ಷದ ಸುಮಯಾ ಎಂಬವರೊಂದಿಗೆ ಗಂಡನ ಮನೆಯಾದ ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಎಂಬಲ್ಲಿಂದ ತಂದೆಯ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ತಂದೆಯ ಮನೆಗೂ ಹೋಗದೆ ವಾಪಾಸ್ಸು ಗಂಡನ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ.
 
ಈ ಬಗ್ಗೆ ಶ್ರೀಮತಿ ರಶಿದಾ ಭಾನುರವರ ತಂದೆ ಬದ್ರುದ್ದೀನ್‌ರವರು ಕುಂದಾಪುರ ಠಾಣೆಯಲ್ಲಿ ದಿನಾಂಕ ೦೬/೧೦/೨೦೦೯ ರಂದು ೧೭-೧೫ ಗಂಟೆಗೆ ದೂರು ನೀಡಿದ್ದು ಅದರಂತೆ ಅಪರಾಧ ಕ್ರಮಾಂಕ ೨೬೫/೦೯ ಕಲಂ ಹೆಂಗಸು ಮತ್ತು ಮಕ್ಕಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕಾಣೆಯಾದ ಹೆಂಗಸಿನ ಮತ್ತು ಮಕ್ಕಳ ಚಹರೆ ವಿವರ ಈ ಕೆಳಗಿನಂತಿರುತ್ತದೆ.
 
೧) ಕಾಣೆಯಾದ ಹೆಂಗಸಿನ ಚಹರೆ : ಹೆಸರು: ಶ್ರೀಮತಿ ರಶೀದಾ ಬಾನು (೨೫ ವರ್ಷ) ಗಂಡ : ಇಲಿಯಾಸ್, ಎತ್ತರ: ೫ ಅಡಿ ೩ ಇಂಚು, ಗೋಧಿ ಮೈಬಣ್ಣ, ದುಂಡು ಮುಖ, ಕಾಫಿ ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ, ಉರ್ದು, ಮಲಯಾಳಂ ಮಾತನಾಡುತ್ತಾರೆ.
 
೨) ಕಾಣೆಯಾದ ಮಕ್ಕಳ ಚಹರೆ : ಅ) ಹೆಸರು : ಸುಭಾನ್ ( ೬ ವರ್ಷ), ಗೋಧಿ ಮೈಬಣ್ಣ, ಬಿಳಿ ಬಣ್ಣದ ಟೀ ಶರ್ಟ್ & ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಆ) ಹೆಸರು : ಸುಮಯಾ (೫ ವರ್ಷ), ಗೋಧಿ ಮೈಬಣ್ಣ, ಬಿಳಿ ಬಣ್ಣದ ಫ್ರಾಕ್ ಧರಿಸಿರುತ್ತಾಳೆ. ನಮೂದಿತ ಚಹರೆಯ ವ್ಯಕ್ತಿಗಳು ಪತ್ತೆಯಾದಲ್ಲಿ ಪೊಲೀಸ್ ಉಪ ನಿರೀಕ್ಷಕರು ಕುಂದಾಪುರ ಠಾಣೆ ಅಥವಾ ಪೊಲೀಸ್ ವೃತ್ತ ನಿರೀಕ್ಷಕರು, ಕುಂದಾಪುರ ವೃತ್ತ (ದೂರವಾಣಿ ೦೮೨೫೪ - ೨೩೦೩೩೮)ರವರನ್ನು ಸಂಪರ್ಕಿಸಲು ಕೋರಲಾಗಿದೆ

ವರದಿ: ಇಬ್ರಾಹಿಂ ಗಂಗೊಳ್ಳಿ, ಕುಂದಾಪುರ

Share: