ಮುಂಡಗೋಡು : ಬುಧವಾರ ಸಂಜೆ ಎರಗಿದ ಸಿಡಿಲಿನಿಂದ ತೆಂಗಿನ ಮರಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ತಾಲೂಕಿನ ಇಂದೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕಲ್ಮೇಶ ದುಗ್ಗಳ್ಳಿ ಎಂಬುವವರಿಗೆ ಸೇರಿದ ಮನೆಯ ಎರಡು ತೆಂಗಿನ ಮರಗಳಿಗೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡ ಪರಿಣಾಮ ಮರ ಸುಟ್ಟು ಹೋಗಿದೆ.
ಕೆಲ ಹೊತ್ತಿ ನಂತರ ಸುರಿದ ಮಳೆಯಿಂದ ಹೊತ್ತಿರುವ ಬೆಂಕಿ ನಂದಿಹೋಗಿದೆ .