ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಾರಿಕಾಂಬಾ ಜಾತ್ರೆಯು ಹಿನ್ನೆಲೆ ಜುಲೈ 27,28 ರಂದು ಭಟ್ಕಳದಲ್ಲಿ ಮದ್ಯ ನಿಷೇಧ.!

ಮಾರಿಕಾಂಬಾ ಜಾತ್ರೆಯು ಹಿನ್ನೆಲೆ ಜುಲೈ 27,28 ರಂದು ಭಟ್ಕಳದಲ್ಲಿ ಮದ್ಯ ನಿಷೇಧ.!

Wed, 27 Jul 2022 06:38:03  Office Staff   SO NEWS

ಭಟ್ಕಳ: ತಾಲೂಕಿನಲ್ಲಿ ಮಾರಿಕಾಂಬಾ ದೇವಿ ಜಾತ್ರೆಯು ಜು.26 ರಿಂದ 28 ವರೆಗೆ ನಡೆಯಲಿದೆ. ಜಾತ್ರೆಯ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಭಟ್ಕಳ ತಾಲೂಕಿನಾದ್ಯಂತ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಜು.27 ರ ಸಂಜೆ 6.00 ಗಂಟೆಯಿಂದ ಜು. 28 ರ ರಾತ್ರಿ 12.00 ಗಂಟೆಯವರೆಗೆ ಭಟ್ಕಳ ತಾಲೂಕಿನಲ್ಲಿರುವ ಎಲ್ಲಾ ಮದ್ಯದಂಗಡಿ, ವೈನ್ ಶಾಪ್ ಮತ್ತು ಬಾರ್‌ಗಳನ್ನು ಬಂದ್ ಮಾಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ


Share: