ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಾಜಿ ಸಚಿವ ರಾಣೆ ನಿಧನಕ್ಕೆ ಜಗದೀಪ ತೆಂಗೇರಿ ಶೋಕ

ಮಾಜಿ ಸಚಿವ ರಾಣೆ ನಿಧನಕ್ಕೆ ಜಗದೀಪ ತೆಂಗೇರಿ ಶೋಕ

Tue, 06 Sep 2022 04:00:01  Office Staff   SO News

ಹೊನ್ನಾವರ: ನಮ್ಮನ್ನಗಲಿದ ಮಾಜಿ ಸಚಿವ, ಮೂರು ಬಾರಿ ಕಾರವಾರ-ಜೋಯಿಡಾ ವಿಧಾನ ಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗಿ ಜನಪ್ರಿಯ ಶಾಸಕರಾಗಿದ್ದ ಪ್ರಭಾಕರ ರಾಣೆಯವರು ಶಿಕ್ಷಣ ಪ್ರೇಮಿಯಾಗಿದ್ದರು. ಕಾರವಾರದ ಸುತ್ತಮುತ್ತ ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ, ಪ್ರತಿಭಾವಂತ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದರು. ಇಂತಹ ಅಪ್ರತಿಮ ಶಿಕ್ಷಣ ಪ್ರೇಮಿ, ಸೆಪ್ಟೆಂಬರ್ ೫, ಶಿಕ್ಷಕ ದಿನಾಚರಣೆಯ ದಿನವೇ ನಮ್ಮೇಲ್ಲರಿಂದ ದೂರವಾಗಿದ್ದೂ ಮಾತ್ರ ವಿಧಿ ಲಿಖಿತ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್ ತೆಂಗೇರಿ ದುಃಖಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಣಿಯವರು  ಕಾರವಾರ ಸುತ್ತಮುತ್ತ ಹುಟ್ಟು ಹಾಕಿದ ಅನೇಕ ಶಿಕ್ಷಣ ಸಂಸ್ಥೆಗಳು ನಾಡಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಾರಿದೀಪವಾಗುವುದರಲ್ಲಿ ಎರಡು ಮಾತಿಲ್ಲ. ಇಂತಹ ಜನಾನುರಾಗಿ ನಾಯಕ ನಮ್ಮ ನಡುವೆ ಮತ್ತೆ ಹುಟ್ಟಿ ಬರಲಿ ಎಂದು ಜಗದೀಪ ಎನ್ ತೆಂಗೇರಿ ಎಂದು ಪ್ರಾರ್ಥಿಸಿದ್ದಾರೆ.


Share: