ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಾಜಿ ಸಚಿವ ಪ್ರಭಾಕರ ರಾಣೆ ಅಸ್ತಂಗತ

ಮಾಜಿ ಸಚಿವ ಪ್ರಭಾಕರ ರಾಣೆ ಅಸ್ತಂಗತ

Mon, 05 Sep 2022 23:06:58  Office Staff   SO News

ಕಾರವಾರ : ಮಾಜಿ ಸಚಿವ ಕಾರವಾರದ  ಪ್ರಭಾಕರ ರಾಣೆ  ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ದರ ಗ್ರಾಮದ ತಮ್ಮ ಮನೆಯಲ್ಲಿ ಸೋಮವಾರ ಮಧ್ಯಾಹ್ನ 1-30 ಕ್ಕೆ ವಯೋಸಹಜ ಅನಾರೋಗ್ಯದಿಂದ  ನಿಧನರಾಗಿದ್ದಾರೆ.

ಎಸ್  ಬಂಗಾರಪ್ಪನವರ ಕ್ರಾಂತಿರಂಗದ ಮೂಲಕ ರಾಜಕೀಯಕ್ಕೆ‌ ಧುಮುಕಿದ ರಾಣೆ ಅವರು, ವೀರಪ್ಪ ಮೊಯ್ಲಿ ಸರ್ಕಾರದಲ್ಲಿ 1993-94 ರಲ್ಲಿ ವಯಸ್ಕರ ಶಿಕ್ಷಣ ಮತ್ತು ಗ್ರಂಥಾಲಯ ಸಚಿವರಾಗಿದ್ದರು. ಸತತ 13 ವರ್ಷಗಳ ಕಾಲ ಕಾರವಾರ-ಜೋಯಿಡಾ ಕ್ಷೇತ್ರದ ಶಾಸಕರಾಗಿ ಅವರು ಸೇವೆ ಸಲ್ಲಿಸಿದರು.

 ಕಾರವಾರ ಜೋಯಿಡಾ ಮತ್ತು ದಾಂಡೇಲಿ ತಾಲೂಕಿನಲ್ಲಿ ಸರಿ ಸುಮಾರು 23 ಶಿಕ್ಷಣ  ಸಂಸ್ಥೆ ಸ್ಥಾಪಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. 

ಪ್ರಭಾಕರ ರಾಣೆ ನಿಧನಕ್ಕೆ ನಾಡಿನ ವಿವಿಧ ಭಾಗಗಳ  ಗಣ್ಯರು, ಕುಟುಂಬ ವರ್ಗದವರು ಸಂತಾಪ ಸೂಚಿಸಿದ್ದಾರೆ.


Share: