ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಾಂಕಾಳ್ ವೈದ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡುವಂತೆ ತಂಝೀಮ್ ಆಗ್ರಹ

ಮಾಂಕಾಳ್ ವೈದ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡುವಂತೆ ತಂಝೀಮ್ ಆಗ್ರಹ

Sun, 14 May 2023 01:20:30  Office Staff   SOnews


ಭಟ್ಕಳ: ೩೨ಸಾವಿರಕ್ಕೂ ಅಧಿಕ ಮತ ಪಡೆದು ಉ.ಕ ಜಿಲ್ಲೆಯಲ್ಲಿಯೆ ಅತ್ಯಧಿಕ ಮತಗಳ ಅಂತರದಿ0ದ ಕಾಂಗ್ರೇಸ್ ಪಕ್ಷದ ಮಾಂಕಾಳ್ ವೈದ್ಯ ಗೆಲುವು ದಾಖಲಿಸಿದ್ದು ಕಾಂಗ್ರೇಸ್ ಸರ್ಕಾರದಲ್ಲಿ ಅವರಿಗೆ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಬೇಕೆಂದು ಭಟ್ಕಳದ ರಾಜಕೀಯ, ಸಾಮಾಜಿಸ ಸಂಘಟನೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಕಾಂಗ್ರೇಸ್ ಉನ್ನತ ಮುಖಂಡರನ್ನು ಆಗ್ರಹಿಸಿದೆ. 

ಈ ಕುರಿತು ಶನಿವಾರ ಸಂಜೆ ತಂಝೀಮ್ ನ ರಾಜಕೀಯ ಸಮಿತಿ ಸಂಚಾಲಕ ನ್ಯಾಯಾವಾದಿ ಇಮ್ರಾನ್ ಲಂಖಾ ತಂಝೀಮ್ ಕಾರ್ಯಲಯದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. 

ತಂಝೀಮ್ ಸಂಸ್ಥೆಯ ಕಳೆದ ಬಾರಿ ನಡೆದ ಕೆಲವು ಅಚಾತುರ್ಯಗಳಿಂದಾಗಿ ಈಬಾರಿ ಅತ್ಯಂತ ಚಾಣಕ್ಷತನದಿಂದ ಕೊನೆ ಘಳಿಗೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯನ್ನು ಬೆಂಬಲಿಸಿ ರಾತ್ರೋರಾತ್ರಿ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಗೆ ಸಂದೇಶವನ್ನು ನೀಡಿತ್ತು. ತಂಝೀಮ್ ನಿರ್ಣಯವನ್ನು ಚಾಚು ತಪ್ಪದೆ ಪಾಲಿಸಿದ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು. 

ಭಟ್ಕಳದಲ್ಲಿ ಶಾಂತಿ ಸೌಹಾರ್ದಕ್ಕಾಗಿ ಕಾಂಗ್ರೇಸ್ ಪಕ್ಷಕ್ಕ ಜನರು ಮತ ನೀಡಿದ್ದಾರೆ. ಈಗಿನ ವಾತವರಣ ತಿಳಿಯಾಗಿದೆ. ಮುಂದೆಯೂ ಸಹ ಇಂತಹದ್ದೇ ವಾತವರಣ ಇರುವಂತೆ ನೋಡಿಕೊಳ್ಳಬೇಕು. ತಂಝೀಮ್ ಸಂಸ್ಥೆ ಯಾವತ್ತ ತನ್ನ ಸ್ವಾರ್ಥಕ್ಕಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವದಿಲ್ಲ ಅದು ಏನಿದ್ದರೂ ಸಮುದಾಯ ಮತ್ತು ಭಟ್ಕಳದ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದ ಅವರು ಈ ಸಂದರ್ಭದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಮಾಂಕಾಳ್ ವ್ಯದ್ಯರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಿದರು. 

ತಂಝೀಮ್ ಅಧ್ಯಕ್ಷ ಜೆ.ಡಿ.ಎಸ್. ಮುಖಂಡ ಇನಾಯತುಲ್ಲಾ ಶಾಂಬದ್ರಿ ಮಾತನಾಡಿ, ತಂಝೀಮ್ ಯಾವತ್ತು ಪಕ್ಷಬೇಧವನ್ನು ಮಾಡುವುದಿಲ್ಲ. ಯಾವುದು ಸಮುದಾಯಕ್ಕೆ ಹಿತವಾಗುತ್ತದೋ ಅಂತಹ ನಿರ್ಣಯಗಳನ್ನೇ ಕೈಗೊಳ್ಳುತ್ತದೆ. ನನ್ನ ಪಕ್ಷ ಬೇರೆಯಾದರೂ ತಂಝೀಮ ನಿರ್ಣಯಕ್ಕೆ ಬದ್ಧರಾಗಿ ನಾವು ಕೆಲಸ ಮಾಡಿದ್ದೇವೆ. ಎಂದರು. ಕಾಂಗ್ರೇಸ್ ಅಭ್ಯರ್ಥಿ ಮಾಂಕಾಳ್ ವೈದ್ಯರು ಅತ್ಯಧಿಕ ಮತಗಳಿಸಿ ಶಾಸಕರಾಗಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. 
ಕಾರ್ಯಕಾರಿ ಸಮಿತಿ ಸದಸ್ಯ ಅಝೀಝರ‍್ರಹ್ಮಾನ್ ರುಕ್ನುದ್ದೀನ್ ಮಾತನಾಡಿ, ತಂಝೀಮ್ ನಿರ್ಣಯವನ್ನು ಜಾರಿಗೆ ತರುವಲ್ಲಿ ವಿವಿಧ ಸ್ಪೋರ್ಟ್ಸ್ ಕ್ಲಬ್ ಗಳು, ಸಾರ್ವಜನಿಕರು, ಉಲೇಮಾಗಳು ತುಂಬಾ ಸಹಕಾರ ನೀಡಿದ್ದಾರೆ ಅವರೆಲ್ಲರಿಗೂ ತಂಝೀಮ್ ಸಂಸ್ಥೆ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು. 
 


Share: