ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಹಿಳೆ ಬ್ಯಾಗ್ ನಿಂದ ಬಂಗಾರ ಮತ್ತು ಹಣ ಕದ್ದ ಮೂವರು ಚಾಲಾಕಿಯರ ಬಂಧನ

ಮಹಿಳೆ ಬ್ಯಾಗ್ ನಿಂದ ಬಂಗಾರ ಮತ್ತು ಹಣ ಕದ್ದ ಮೂವರು ಚಾಲಾಕಿಯರ ಬಂಧನ

Wed, 29 Jun 2022 04:17:31  Office Staff   SO News

ಕುಮಟಾ : ಪ್ರಯಾಣಿಕರ ಬ್ಯಾಗ್‌ನಿಂದ ಚಿನ್ನಾಭರಣ, ಹಣ ಎಗರಿಸಿದ್ದ  ಮೂವರು ಚಾಲಾಕಿ ಕಳ್ಳರನ್ನ  ಕುಮಟಾ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರಿನ ಅತ್ತಿಬೆಲೆ ಮೂಲದ ಆದಿಯಮ್ಮ ತಿರುಪತಿ, ವೆಂಕ್ಟಮ್ಮ ತಿರುಪತಿ, ಲಲಿತಾ ಅಲಿಯಾಸ್ ಭಾಗ್ಯ ನಾಗರಾಜ ಬಂಧಿತ ಆರೋಪಿಗಳಾಗಿದ್ದಾರೆ. 

ಜೂನ್ 21 ರಂದು ಕಮಟಾದ ಬಸ್‌ನಿಲ್ದಾಣದಲ್ಲಿ ಭಟ್ಕಳದ ತೆರ್ನಮಕ್ಕಿಯ ಮಂಗಲಾ ರಾಮಚಂದ್ರ  ಎಂಬುವವರ ಬ್ಯಾಗ್  ಕಳ್ಳತನ ಮಾಡಲಾಗಿತ್ತು.  ಒಟ್ಟು 124 ಗ್ರಾಂ ಬಂಗಾರದ ಆಭರಣ, 50 ಸಾವಿರ ನಗದು ಎಗರಿಸಿ ಕಳ್ಳರು ಪರಾರಿಯಾಗಿದ್ದರು.  ಬಸ್ ಹತ್ತುವ ವೇಳೆ ಬ್ಯಾಗಿನ ಜಿಪ್ ತೆಗೆದು ಕಳ್ಳತನ ಮಾಡಲಾಗಿತ್ತು.  

ಪ್ರಕರಣ ದಾಖಲಿಸಿಕೊಂಡ ಕುಮಟಾ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದರು. ಬಂಧಿತ ಮೂವರು ಮಹಿಳೆಯರಾಗಿದ್ದು,  ಐಪಿಸಿ ಕಲಂ 379 ಅಡಿ ಪ್ರಕರಣ ದಾಖಲಿಸಲಾಗಿದೆ.  ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: