ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಹಿಳೆಯರಿಗೆ ಕೌಶಲ್ಯ ತರಬೇತಿ ಅಗತ್ಯ : ರವಿ ಜಿ ಕೆ.

ಮಹಿಳೆಯರಿಗೆ ಕೌಶಲ್ಯ ತರಬೇತಿ ಅಗತ್ಯ : ರವಿ ಜಿ ಕೆ.

Fri, 30 Sep 2022 03:15:25  Office Staff   SO News

ಭಟ್ಕಳ: ಮಹಿಳೆಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಕೌಶಲ್ಯಯುತವಾದ ತರಬೇತಿಯ ಅಗತ್ಯತೆ ಇದೆ ಎಂದು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ರವಿ ಜಿ.ಕೆ. ಹೇಳಿದರು. 

ಅವರು ಇಲ್ಲಿನ ಬೇಂಗ್ರೆಯಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ ವತಿಯಿಂದ ಹಮ್ಮಿಕೊಂಡಿದ್ದ ಹಪ್ಪಳ, ಉಪ್ಪಿನಕಾಯಿ, ಮಸಾಲೆ ಪದಾರ್ಥಗಳ ತಯಾರಿಕಾ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಸಿರಾ ಕೈಗಾರಿಕೆಯ ಮಾಲಕ ಎಂ.ಡಿ.ಮ್ಯಾಥ್ಯೂ ವಹಿಸಿದ್ದರು. 
ಅತಿಥಿಯಾಗಿ ಭಾಗವಹಿಸಿದ್ದ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲ ಕೆ. ಮರಿಸ್ವಾಮಿ, ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ದಯಾನಂದ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಶಾಖಾಧಿಕಾರಿ ಪೌಣೇಶ, ಫೆಲಿಕ್ಸ್ ಫೆರ್ನಾಂಡೀಸ್, ಜ್ಯೋತಿ,  ಗೌರೀಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ೩೫ ಜನ ಮಹಿಳೆಯರು ಭಾಗವಹಿಸಿದ್ದರು


Share: