ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರ

ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರ

Fri, 22 Sep 2023 21:13:45  Office Staff   Vb

ಹೊಸದಿಲ್ಲಿ: ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲಿ ಗುರುವಾರ 11 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಸರ್ವಾನುಮತದಿಂದ ಅಂಗೀಕಾರವಾಗಿದೆ. 215 ಮಂದಿ ಮಸೂದೆ ಪರ ಚಲಾವಣೆ ಮಾಡಿದ್ದರೆ, ಮಸೂದೆ ವಿರುದ್ಧ ಯಾರೂ ಮತ ಚಲಾಯಿಸಿಲ್ಲ. ಇನ್ನು ಮಸೂದೆ ಅಂಗೀಕಾರಕ್ಕೆ ರಾಷ್ಟ್ರಪತಿ ಅಂಕಿತ ಮಾತ್ರ ಬಾಕಿ ಉಳಿದಿದೆ. ಈ ಮಸೂದೆ ಲೋಕಸಭೆಯಲ್ಲಿ ಬುಧವಾರ ಅಂಗೀಕಾರವಾಗಿತ್ತು. ಮಸೂದೆ ಪರವಾಗಿ 452 ಹಾಗೂ ಮಸೂದೆ ವಿರುದ್ಧವಾಗಿ 2 ಮತಗಳು ಚಲಾವಣೆಯಾಗಿದ್ದವು.

ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗುವುದರೊಂದಿಗೆ ಸಂಸತ್ತಿನಲ್ಲಿ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿಯು ಕಾಯ್ದೆಯ ರೂಪವನ್ನು ಪಡೆಯಲಿದೆ. ಮೀಸಲಾತಿಯು ಜನಗಣತಿ ಹಾಗೂ ಕ್ಷೇತ್ರ ಪುನರ್ವಿಂಗಡನೆಯ ಬಳಿಕ ಅನುಷ್ಠಾನಗೊಳ್ಳಲಿದೆ.

ರಾಜ್ಯಸಭೆಯಲ್ಲಿ ಮಸೂದೆ ಅಂಗೀಕರಿಸಿದ ಬಳಿಕ ಸಭಾಪತಿ ಜಗದೀಪ್ ಧನ್ನರ್, “ಇದು ಐತಿಹಾಸಿಕ ಸಾಧನೆ, ಅಭಿನಂದನೆಗಳು, ಹಿಂದೂ ಕ್ಯಾಲೆಂಡರ್ ಪ್ರಕಾರ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವಾಗಿರುವುದು ಕಾಕತಾಳೀಯವಾಗಿದೆ' ಎಂದರು. ನೂತನ ಸಂಸತ್‌ ಭವನದಲ್ಲಿ ಅಂಗೀಕಾರವಾಗುತ್ತಿರುವ ಮೊದಲನೇ ಮಸೂದೆ ಇದಾಗಿದೆ.


Share: