ಶಿವಮೊಗ್ಗ : ‘ಸುಶಾಸನ ಮಾಸ’ ದ ಅಂವಾಗಿ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಲಯ ಮಟ್ಟದ ಪೋಸ್ಟರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಶಿವಮೊಗ್ಗದ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ರನ್ವಯ ಉನ್ನತ ಶಿಕ್ಷಣದ ಪುನರ್ ವಿನ್ಯಾಸ ಕುರಿತು ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಪೋಸ್ಟರ್ ಸ್ಪರ್ಧೆಯಲ್ಲಿ ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ 7ನೇ ಸೆಮಿಸ್ಟರ್(ಸಿಎಸ್) ವಿದ್ಯಾರ್ಥಿನಿ ನೇಹಾ ಕೆ.ಕೆ ಪ್ರಥಮ ಬಹುಮಾನ, ಗಂಗಾವತಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ 5ನೇ ಸೆಮಿಸ್ಟರ್(ಸಿಇ) ವಿದ್ಯಾರ್ಥಿ ಸುಶೀಲ್ ಕೆ ಗುನಗಾ ದ್ವಿತೀಯ ಬಹುಮಾನ, ರಾಯಚೂರು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ 7ನೇ ಸೆಮಿಸ್ಟರ್(ಇಸಿ) ವಿದ್ಯಾರ್ಥಿನಿ ಪೂರ್ಣಿಮಾ ಜಿ ಇವರು ತೃತೀಯ ಬಹುಮಾನ ಪಡೆದುಕೊಂಡರು.
ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಸುಶಾಸನದ ವಿವಿಧ ಆಯಾಮಗಳು ವಿಷಯ ಕುರಿತು ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಪೋಸ್ಟರ್ ಸ್ಪರ್ಧೆಯಲ್ಲಿ ಭದ್ರಾವತಿಯ ಸರ್ಕಾರಿ ವಿಐಎಸ್‍ಎಸ್‍ಜೆ ಪಾಲಿಟೆಕ್ನಿಕ್ ಕಾಲೇಜಿನ 3ನೇ ಸೆಮಿಸ್ಟರ್(ಇಇ) ವಿದ್ಯಾರ್ಥಿ ಲಖನ್ ಸಿ ಪ್ರಥಮ ಬಹುಮಾನ, ಕಾರ್ಕಳ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 5ನೇ ಸೆಮಿಸ್ಟರ್(ಸಿಇ) ವಿದ್ಯಾರ್ಥಿ ಓಂಕಾರ್ ಸಿ ಆಚಾರ್ ದ್ವಿತೀಯ ಬಹುಮಾನ, ಕಲಬುಗಿರ್ಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ 1ನೇ ಸೆಮಿಸ್ಟರ್(ಸಿಎಸ್) ವಿದ್ಯಾರ್ಥಿನಿ ಕಲ್ಪನಾ ಚವಾಣ್ ತೃತೀಯ ಬಹುಮಾನ ಪಡೆದಿರುತ್ತಾರೆ ಎಂದು ಶಿವಮೊಗ್ಗ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.