ಭಟ್ಕಳ: ತ್ಯಾಗ ಬಲಿದಾನಗಳ ಪ್ರತೀಕವಾದ ಈದುಲ್ ಅದ್ಹಾ (ಬಕ್ರೀದ್ ಹಬ್ಬ) ಜು.10 ಭಾನುವಾರದಂದು ಆಚರಿಸಲ್ಪಡುತ್ತಿದ್ದು ವಿಶೇಷ ಪ್ರಾರ್ಥನೆಯನ್ನು ವಿವಿಧ ಮಸೀದಿಗಳಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.
ಮಳೆಗಾಲವಾಗಿದ್ದರಿಂದ ನಗರದ ವಿವಿಧ ಜಾಮಿಯಾ ಮಸೀದಿಗಳಲ್ಲಿ ಈದ್ ವಿಶೇಷ ಪ್ರಾರ್ಥನೆ ನಡೆಸಲು ಈದ್ಗಾ ಕಮಿಟಿ ತಿಳಿಸಿದೆ. ಪ್ರಾರ್ಥನೆಯನ್ನು ಜಾಮಿಯಾ ಮಸ್ಜಿದ್, ಖಲೀಫಾ ಜಾಮಿಯಾ ಮಸ್ಜಿದ್, ತಂಝೀಮ್ ಜಾಮಿಯಾ ಮಸ್ವಿದ್, ನವಾಯತ್ ಕಾಲೋನಿ, ಬಿಲಾಲ್ ಜುಮ್ಮಾ ಮಸ್ಜಿದ್, ಮಖ್ದೂಮಿಯಾ ಜುಮ್ಮಾ ಮಸ್ಜಿದ್ಗಳಲ್ಲಿ ಬೆಳಿಗ್ಗೆ 7 ಗಂಟೆಗೆ, ಮದೀನಾ ಮಸ್ಜಿದ್, ನೂರ್ ಮಸ್ಜಿದ್, ಹಮ್ಝಾ ಮಸ್ಜಿದ್, ಬದ್ರಿಯಾ ಜುಮ್ಮಾ ಮಸ್ಜಿದ್, ಅಹ್ಮದ್ ಸಯೀದ್ ಜುಮ್ಮಾ ಮಸ್ಜಿದ್, ಇಮಾಮ್ ಬುಖಾರಿ ಮಸ್ಜಿದ್ ಗಳಲ್ಲಿ ಬೆಳಿಗ್ಗೆ 7.15ಕ್ಕೆ ನಮಾಜ್ ನಿರ್ವಹಿಸಲಾಗುವುದು ಎಂದೂ ತಿಳಿಸಲಾಗಿದೆ.