ಭಟ್ಕಳ:ಯಾರೋ ಕಳ್ಳರು ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಕಾಮಾಕ್ಷಿ ಪೆಟ್ರೋಲ್ ಪಂಪ್ ಸಮೀಪ ನಡೆದಿದೆ.
ಕಾಮಾಕ್ಷಿ ಪೆಟ್ರೋಲ್ ಪಂಪ್ ಹಿಂಬದಿಯ ಅಮಯ ಎಂಬುವವರ ಮನೆಯ ಬಾಗಿಲನ್ನು ಯಾವುದೋ ಬಲವಾದ ವಸ್ತುವಿನಿಂದ ಒಡೆದು ಮನೆಯ ಒಳಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಕಪಾಟಿನ ಬಾಗಿಲನ್ನು ತೆರೆದು 1 ಲಕ್ಷ ಮೌಲ್ಯದ ಬಂಗಾರದ ನಕ್ಲೆಸ್, ಒಂದು ಲಕ್ಷ ಮೌಲ್ಯದ ಬಂಗಾರದ ಮುತ್ತಿನ ಹಾರ, 80 ಸಾವಿರ ಮೌಲ್ಯದ ಬಂಗಾರ ಮುತ್ತಿನ 2 ಬಳೆ , 30 ಸಾವಿರ ಮೌಲ್ಯದ ಬಂಗಾರದ ಒಂದು ಜೊತೆ ಕಿವಿ ಒಲೆ ಹಾಗೂ 10 ಸಾವಿರ ಮೌಲ್ಯದ ಬಂಗಾರದ ಕಿವಿ ಬುಗುಡಿ ಹೀಗೆ ಒಟ್ಟು ಅಂದಾಜು 128 ಗ್ರಂ ತೂಕದ 3,20,000 ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನುಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರಿಗೆ ಬಲೆ ಬಿಸಿದ್ದಾರೆ.