ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪ ಟಿಪ್ಪರ್ ಢಿಕ್ಕಿ ಹೊಡೆದು ಮನೆಯ ಬಳಿ ಆಟವಾಡುತ್ತಿದ್ದ ಆರು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಇಂದು ಬಜಾಲ್ ನಲ್ಲಿ ಸಂಭವಿಸಿದೆ.
ಕಟ್ಟಪುಣಿ ಬಳಿ ಕೊರ್ದಬ್ಬು ದೈವಸ್ಥಾನದ ಬಳಿಯ ನಿವಾಸಿಯಾಗಿರುವ ಹಿದಾಯತುಲ್ಲ ಅವರ ಆರು ವರ್ಷದ ಮಗ ಮೊಹಮ್ಮದ್ ಜೀಶನ್ ಸಾವನ್ನಪ್ಪಿದ ಬಾಲಕ ಎಂದು ತಿಳಿದು ಬಂದಿದೆ.
ಬಾಲಕ ಸೈಕಲ್ ನಲ್ಲಿ ಮನೆಯ ಬಳಿಯ ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಅದೇ ಮಾರ್ಗದಲ್ಲಿ ಬಂದ ಟಿಪ್ಪರ್ ಬಾಲಕನ ಮೇಲೆ ಹರಿದಿದೆ ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ