ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮದುವೆಗೆ ಕರೆಯಲು ಪದ್ಮಶ್ರೀ ತುಳಸಿ ಗೌಡ ಮನೆಗೆ ಬಂದ ಸಾಲು ಮರದ ತಿಮ್ಮಕ್ಕ

ಮದುವೆಗೆ ಕರೆಯಲು ಪದ್ಮಶ್ರೀ ತುಳಸಿ ಗೌಡ ಮನೆಗೆ ಬಂದ ಸಾಲು ಮರದ ತಿಮ್ಮಕ್ಕ

Tue, 27 Dec 2022 06:06:41  Office Staff   SO News

ಅಂಕೋಲಾ :  ತಾಲೂಕಿನ ಹೊನ್ನಳ್ಳಿಯಲ್ಲಿರುವ ಪದ್ಮಶ್ರೀ ತುಳಸಿ ಗೌಡ ಮನೆಗೆ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಸೋಮವಾರ ಭೇಟಿ ನೀಡಿದರು.

ತಿಮ್ಮಕ್ಕ ಅವರನ್ನ ತುಳಸಿ ಗೌಡ ಆತ್ಮೀಯವಾಗಿ ಕೈಹಿಡಿದು ತಮ್ಮ ಮನೆಗೆ ಬರಮಾಡಿಕೊಂಡರು. ತಮ್ಮ ಮಗನ ಮದುವೆಗೆ ಆಹ್ವಾನ ನೀಡಿ ಮದುವೆ ಬರುವಂತೆ ತಿಳಿಸಿದರು. ಅಲ್ಲದೇ ವೃಕ್ಷ ಮಾತೆ ತುಳಸಿ ಗೌಡರನ್ನು ತಿಮ್ಮಕ್ಕ ಶಾಲು ಹೊದಿಸಿ ಸನ್ಮಾನಿಸಿದರು. 

ಇಬ್ಬರು ವೃಕ್ಷಮಾತೆಯರು ಹೊನ್ನಳ್ಳಿಯಲ್ಲಿ ಒಂದಾಗಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಅಗಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ನಾಯಕ, ತಿಮ್ಮಕ್ಕರ ಪುತ್ರ ಉಮೇಶ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.


Share: