ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಕ್ಕಳ ಕಳ್ಳತನ : ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳನ್ನು ಹರಡುವವರ ಮೇಲೆ ಕಾನೂನು ರೀತಿ ಕ್ರಮ.

ಮಕ್ಕಳ ಕಳ್ಳತನ : ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳನ್ನು ಹರಡುವವರ ಮೇಲೆ ಕಾನೂನು ರೀತಿ ಕ್ರಮ.

Thu, 15 Sep 2022 02:01:20  Office Staff   SO News

ಧಾರವಾಡ : ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಸುಳ್ಳು ವದಂತಿಗಳು ಹರಿದಾಡುತ್ತಿದ್ದು, ಇದರೊಂದಿಗೆ ಸಂಬಂಧಿಸಿದಂತೆ ಬೇರೆ ದೇಶದ ವಿಡಿಯೋಗಳನ್ನು ಭಿತ್ತರಿಸಲಾಗುತ್ತಿದೆ. ಅಮಾಯಕ ವ್ಯಕ್ತಿಗಳನ್ನು ತಡೆದು ಹಲ್ಲೆ ಮಾಡುವ ಘಟನೆಗಳು ಬೆಳಕಿಗೆ ಬಂದಿರುತ್ತವೆ. ಮಕ್ಕಳ ಕಳ್ಳತನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳನ್ನು ಹರಡುವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧೀಕ್ಷಕ ಲೋಕೇಶ್ ಜಗಲಾಸರ್ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾರ್ವಜನಿಕರು ತಮ್ಮ  ಗ್ರಾಮ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ 112 ಸಹಾಯವಾಣಿಗೆ ಕರೆ ಮಾಡಬೇಕು. ಪೋಲಿಸರು ಘಟನಾ ಸ್ಥಳಕ್ಕೆ ಬಂದು ಕೂಲಕುಂಶವಾಗಿ ವಿಚಾರಣೆ ನಡೆಸುತ್ತಾರೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ  ಅಮಾಯಕ ವ್ಯಕ್ತಿಗಳಿಗೆ ತಡೆಒಡ್ಡುವುದಾಗಲಿ, ಹಲ್ಲೆ ಮಾಡುವದಾಗಲಿ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಕಳ್ಳತನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳನ್ನು ಹರಡುವರ ಮೇಲೆ ಕಾನೂನು ರೀತಿ  ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸಹಾಯವಾಣಿ-112, ಜಿಲ್ಲಾ ನಿಸ್ತಂತು ಕೇಂದ್ರ-0836-2233201 ಸಂಪರ್ಕಿಸಬಹುದು ಎಂದು ಪೊಲೀಸ್ ಅಧೀಕ್ಷಕ ಲೋಕೇಶ್ ಜಗಲಾಸರ್ ಅವರು ತಿಳಿಸಿದ್ದಾರೆ.


Share: