ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಂಕಾಳ ವೈದ್ಯರಿಗೆ ಸಚಿವ ಸ್ಥಾನ. ಕಾರವಾರದಲ್ಲಿ ಮೀನುಗಾರರ, ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ

ಮಂಕಾಳ ವೈದ್ಯರಿಗೆ ಸಚಿವ ಸ್ಥಾನ. ಕಾರವಾರದಲ್ಲಿ ಮೀನುಗಾರರ, ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ

Sun, 28 May 2023 15:03:02  Office Staff   SO News

ಕಾರವಾರ  :  ಸರ್ಕಾರದ ಸಚಿವ ಸಂಪುಟದಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಮಂಕಾಳ ವೈದ್ಯರಿಗೆ ಅವಕಾಶ ನೀಡಿದ್ದಕ್ಕೆ ಉತ್ತರಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮೀನುಗಾರರು ವಿಜಯೋತ್ಸವ ಆಚರಿಸಿದ್ದಾರೆ.

ಕಾರವಾರದ ಸುಭಾಷ್ ವೃತ್ತದಲ್ಲಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ನೇತೃತ್ವದಲ್ಲಿ ಮೀನುಗಾರರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭೃಮಿಸಿದರು. ಮಂಕಾಳ ವೈದ್ಯ ಮತ್ತು ಕಾರವಾರ ಶಾಸಕ ಸತೀಶ ಸೈಲ್ ಪರ ಘೋಷಣೆ ಕೂಗಿದರು.

ಇದೇ ವೇಳೆ ಸಿಹಿ ಹಂಚಿ ಸಂಬೃಮಿಸಿದರು. ಮೀನುಗಾರ ಕುಟುಂಬದಲ್ಲಿ ಜನಿಸಿದ ಮೀನುಗಾರರ ಕಷ್ಟಗಳನ್ನ ಅರಿತಿರುವ ಮಂಕಾಳ ವೈದ್ಯ ಅವರಿಗೆ ಸಚಿವ ಸ್ಥಾನ ನೀಡಿರುವುದು ಖುಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ರಾಜು ತಾಂಡೇಲ, ವೆಂಕಟೇಶ ಹರಿಕಾಂತ, ಪ್ರಶಾಂತ ಹರಿಕಾಂತ, ವಿನಾಯಕ, ಶ್ರೀಧರ, ಸದಾನಂದ, ಕಾಂಗ್ರೆಸ್ ಪಕ್ಷದ ಪುರುಷೋತ್ತಮ ಗೌಡ, ನೂತನ ಜೈನ್, ನಾಗರಾಜ ಗೌಡ ಸೇರಿದಂತೆ ಇತರರು ಹಾಜರಿದ್ದರು.


Share: