ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಾರತೀಯ ವಿದೇಶಿ ವಿನಿಮಯ ಸಂಗ್ರಹ 69,000 ಕೋಟಿ ರೂ. ಕುಸಿತ

ಭಾರತೀಯ ವಿದೇಶಿ ವಿನಿಮಯ ಸಂಗ್ರಹ 69,000 ಕೋಟಿ ರೂ. ಕುಸಿತ

Sun, 19 Feb 2023 19:54:51  Office Staff   Vb

ಹೊಸದಿಲ್ಲಿ: ಫೆಬ್ರವರಿ 10ರಂದು ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 8.31 ಬಿಲಿಯ ಡಾಲರ್ (ಸುಮಾರು 69,000 ಕೋಟಿ ರೂ. ನಷ್ಟು ಕುಸಿದು 566.94 ಬಿಲಿಯ ಡಾಲರ್ (ಸುಮಾರು 46.92 ಲಕ್ಷ ಕೋಟಿ ರೂ.) ಆಗಿತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಅಂಕಿಅಂಶಗಳು ತಿಳಿಸಿವೆ. ಈ 8.31 ಶೇ. ಕುಸಿತವು 11 ತಿಂಗಳ ಅವಧಿಯಲ್ಲೇ ಅತಿ ದೊಡ್ಡ ಕುಸಿತವಾಗಿದೆ.

ರೂಪಾಯಿ ಮೌಲ್ಯವು ಡಾಲರ್‌ಗೆ 83ಕ್ಕಿಂತಲೂ ಕೆಳಗೆ ಕುಸಿಯುವುದನ್ನು ತಡೆಯುವ ಉದ್ದೇಶದಿಂದ ಆರ್‌ಬಿಐ ಡಾಲರ್‌ಗಳನ್ನು ಮಾರಾಟ ಮಾಡಿದೆ. ಅದರ ಸಂಭಾವ್ಯ ಪರಿಣಾಮ ಇದಾಗಿರಬಹುದು ಎನ್ನಲಾಗಿದೆ.

ಡಾಲರ್ ವಿರುದ್ಧ ರೂಪಾಯಿ ಮತ್ತಷ್ಟು ಕುಸಿಯುವುದನ್ನು ತಡೆಯಲು ಆರ್ ಬಿಐ ವಾರ ನಾನ್ ಈ ಡೆಲಿವರೆಬಲ್ ಫಾರ್ವಡ್್ರ (ಎನ್ ಡಿಎಫ್) ಮಾರುಕಟ್ಟೆಯಲ್ಲಿ ಡಾಲ‌ ಗಳನ್ನು ಮಾರಾಟ ಮಾಡಿರುವ ಸಾಧ್ಯತೆಯಿದೆ ಎಂದು 'ರಾಯರ್ಸ್' ಸುದ್ದಿ ಸಂಸ್ಥೆ ವರದಿ ಮಾಡಿದೆ. ವಾರದಿಂದ ವಾರಕ್ಕೆ ನಿರ್ವಹಣೆಯ ಆಧಾರದಲ್ಲಿ ಹೇಳುವುದಾದರೆ ವಿದೇಶಿ ವಿನಿಮಯ ಸಂಗ್ರಹವು ಕನಿಷ್ಠ 1.5 ಶೇ. ಇಳಿದಿದೆ.

ಡಾಲರ್ ವಿರುದ್ಧ ಭಾರತೀಯ ರೂಪಾಯಿಯು ನಿರಂತರ ನಾಲ್ಕನೇ ವಾರವೂ ದುರ್ಬಲಗೊಂಡಿದೆ. ಶುಕ್ರವಾರ ರೂಪಾಯಿ ಮೌಲ್ಯವು ಪ್ರತೀ ಡಾಲರ್‌ಗೆ 82.83 ಆಗಿತ್ತು.

ಫೆಬ್ರವರಿ 3ರಂದು ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 1.49 ಬಿಲಿಯ ಡಾಲರ್ (ಸುಮಾರು 12,330 ಕೋಟಿ ರೂ. ನಷ್ಟು ಕುಸಿದು 575.27 ಬಿಲಿಯ ಡಾಲರ್ (47.61 ಲಕ್ಷ ಕೋಟಿ ರೂ.) ಆಗಿತ್ತು. ಅದು ಮೂರು ವಾರಗಳ ಏರಿಕೆ ಪ್ರವೃತ್ತಿಯನ್ನು ಕೊನೆಗೊಳಿಸಿತ್ತು.


Share: