ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ:100 ವಷ೯ ಪೂರೈಸಿದ ಶತಾಯುಷಿ ಮತದಾನರಿಗೆ ತಾಲ್ಲೂಕು ಆಡಳಿತದಿಂದ ಸನ್ಮಾನ

ಭಟ್ಕಳ:100 ವಷ೯ ಪೂರೈಸಿದ ಶತಾಯುಷಿ ಮತದಾನರಿಗೆ ತಾಲ್ಲೂಕು ಆಡಳಿತದಿಂದ ಸನ್ಮಾನ

Mon, 02 Oct 2023 06:30:02  Office Staff   SO News

ಭಟ್ಕಳ: ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನಾಚರಣೆಯ ಹಿನ್ನೆಲೆ ತಾಲೂಕಿನ ವಿವಿಧ ಗ್ರಾಮದಲ್ಲಿನ ಶತಾಯುಷಿ ಮತದಾರರಿಗೆ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಮನೆಗೆ ಭೇಟಿ ನೀಡಿ ಅಭಿನಂದನ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು.. 

ಪ್ರತಿ ವರ್ಷ ಅಕ್ಟೋಬರ್ 1 ರಂದು ಜಾಗತಿಕವಾಗಿ ಹಿರಿಯರ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ . ವಯಸ್ಸಾದವರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳಾದ ವೃದ್ಧಾಪ್ಯ ಮತ್ತು ಹಿರಿಯ ನಿಂದನೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವಯಸ್ಸಾದವರು ಸಮಾಜಕ್ಕೆ ನೀಡುವ ಕೊಡುಗೆಗಳನ್ನು ಶ್ಲಾಘಿಸಲು ಈ ದಿನದ ಉದ್ದೇಶಿಸವಾಗಿದೆ. 

ಈ ಹಿನ್ನೆಲೆಯಲ್ಲಿ ಭಟ್ಕಳ ಸಹಾಯಕ ಆಯುಕ್ತೆ ಡಾ. ನಯನಾ ಎನ್.ಹಾಗೂ ತಹಸೀಲ್ದಾರ ತಿಪ್ಪೇಸ್ವಾಮಿ, ಶತಾಯುಷಿ ಮತದಾರರಾದ ಮಾಸ್ತಿ ನಾಗಪ್ಪ‌ ನಾಯ್ಕ,ನಾಯ್ಕ ಸುಬ್ಬಿ, ಹೆದ್ದಾರಿಮನೆ ದಾಸಯ್ಯ, ನಾಯ್ಕ ಕರಿಯಮ್ಮ, ಮೊಗೇರ ಲಕ್ಷ್ಮೀ, ಇವರ ಮನೆಗಳಿಗೆ ಭೇಟಿ ನೀಡಿ ಅಭಿನಂದನ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು. 

ಈ ಸಂದರ್ಭದಲ್ಲಿ ಮಾವಳ್ಳಿ ಉಪ ತಹಶಿಲ್ದಾರರ  ರಜನಿ ದೇವಾಡಿಗ,ಮಾವಳ್ಳಿ ಕಂದಾಯ ನಿರೀಕ್ಷಕ ಶ್ರೀನಿವಾಸ ಮಾಸ್ತಿ, ಶಿರಾಲಿ ಗ್ರಾಮ ಆಡಳಿತಾಧಿಕಾರಿ ಹೇಮ ನಾಯ್ಕ,ಬೈಲೂರು ಗ್ರಾಮ ಆಡಳಿತಾಧಿಕಾರಿ ಲತಾ ನಾಯ್ಕ ಬೈಲೂರು,ಶಿರಾಲಿ 
ಗ್ರಾಮದ ಗ್ರಾಮಸಹಾಯಕರು ಉಪಸ್ಥಿತಿರಿದ್ದರು


Share: