ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: 2017ರಲ್ಲಿ ನಾಪತ್ತೆಯಾಗಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವೀಯಾದ ಪೊಲೀಸರು

ಭಟ್ಕಳ: 2017ರಲ್ಲಿ ನಾಪತ್ತೆಯಾಗಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವೀಯಾದ ಪೊಲೀಸರು

Fri, 10 Jun 2022 06:16:01  Office Staff   SO NEWS

ಭಟ್ಕಳ: ಕಳೆದ 2017ರಲ್ಲಿ ವಾಹನ ಅಪಘಾತ ಪಡಿಸಿ ಓರ್ವನ ಸಾವಿಗೆ ಕಾರಣನಾಗಿದ್ದು, ನಂತರ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದು ಆರೋಪಿಯೋರ್ವನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ನಗರ ಠಾಣೆಯ ಪೊಲೀಸರು ಯಶಸ್ವೀಯಾಗಿದ್ದಾರೆ. 

ಬಂಧಿತನನ್ನು ಸಾಗರದ ಜನ್ನತ್ ನಗರದ ನಿವಾಸಿ ಮಹಮ್ಮದ್ ನಯಾಜ್ ತಂದೆ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಆರೋಪಿತನು ಖಾಸಗೀ ಬಸ್ ಚಾಲಕನಾಗಿದ್ದು ವಾಹನ ಅಪಘಾತ ಪಡಿಸಿ   ಓರ್ವನ ಸಾವಿಗೆ ಕಾರಣನಾಗಿದ್ದನು.  ನಂತರ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದು ನ್ಯಾಯಾಲಯ ಈತನ ಬಂಧನಕ್ಕೆ ವಾರಂಟ್ ಹೊರಡಿಸಿತ್ತು.

ನಗರ ಠಾಣೆಯ ಇನ್ಸಪೆಕ್ಟರ್ ದಿವಾಕರ ಪಿ.ಎಂ. ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಗಿರೀಶ್ ಅಂಕೋಲೆಕರ್ ಹಾಗೂ ಜೈರಾಮ್ ಹೊಸ್ಕಟ್ಟಾ ಅವರು ಆರೋಪಿಯನ್ನು ತೀರ್ಥಹಳ್ಳಿಯ ಕೊಪ್ಪದಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವೀಯಾಗಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಆರೋಪಿಗೆ 1,500 ದಂಡ ವಿಧಿಸಿ ಜಾಮೀನು ನೀಡಿದೆ.


Share: