ಭಟ್ಕಳ : ಸಾಗರ ರಸ್ತೆಯ ಪೊಲೀಸ್ ಕ್ವಾರ್ಟರ್ಸ್ನ ಮನೆಯೊಂದರಲ್ಲಿ ಪೊಲೀಸರೊಬ್ಬರ ಮನೆಗೆ ನುಗ್ಗಿದ ದರೋಡೆಕೋರರು ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಶುಕ್ರವಾರರಾತ್ರಿ ಈ ಘಟನೆ ನಡೆದಿದ್ದು, ಪೊಲೀಸ್ ಪೇದೆ ಸಂಗಮೇಶ್ ಅವರ ಮನೆ ಸಮೀಪ ಕಳ್ಳರು ರಾತ್ರಿ 10:30 ರ ಸುಮಾರಿಗೆ ಆಗಮಿಸಿದ್ದಾರೆ. ಹೊರಗೆ ನಾಯಿ ಬೊಗಳುವ ಬಗ್ಗೆ ತನ್ನ ಪತಿಗೆ ಕರೆ ಮಾಡಿ ತಿಳಿಸಿದ್ದರು, ಆದರೆ ಪೊಲೀಸ್ ಠಾಣೆಯಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ಕಾನ್ಸ್ಟೆಬಲ್ ಸಂಗಮೇಶ್ ನಾಯಿಗಳು ಯಾವಾಗಲೂ ಬೊಗಳುತ್ತವೆ, ಎಂದು ಹೆಂಡತಿಗೆ ಹೇಳಿದ್ದಾರೆ. ಇದಾದ ಅರ್ಧ ರಾತ್ರಿ 12:30 ಕ್ಕೆ ಯಾರೋ ಬಾಗಿಲು ತಟ್ಟಿದರು." ಪತಿ ಬಂದಿರಬಹುದು ಎಂದು ಭಾವಿಸಿದ ಪತ್ನಿ ಮನೆಯ ಬಾಗಿಲು ತೆರೆದಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಇಬ್ಬರು ವ್ಯಕ್ತಿಗಳು ಚಾಕು ತೋರಿಸಿ ಮನೆಗೆ ನುಗ್ಗಿ ನೇರವಾಗಿ ಆಭರಣದೊಂದಿಗೆ ಪರಾರಿಯಾಗಿದ್ದಾರೆ.
ಮಂಗಳಸೂತ್ರ, ಕಿವಿಯೋಲೆ, ಚಿನ್ನದ ಉಂಗುರ ಸೇರಿದಂತೆ ಚಿನ್ನಾಭರಣಗಳೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಸುಮಾರು 2.5 ಲಕ್ಷದಿಂದ 3 ಲಕ್ಷ ಆಭರಣಗಳನ್ನು ಕಳವು ಮಾಡಲಾಗಿದೆ.
ಕಳ್ಳತನದ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾರವಾರದಿಂದ ಬೆರಳಚ್ಚು ತಜ್ಞರನ್ನೊಳಗೊಂಡ ಶ್ವಾನ ದಳ ಭಟ್ಕಳ ತಲುಪಿ ಕಾನ್ಸ್ಟೆಬಲ್ ಮನೆಗೆ ಆಗಮಿಸಿ ಅಗತ್ಯ ತನಿಖೆ ನಡೆಸಿದೆ . ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.