ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ : ಬೆಂಗ್ರೆಯಲ್ಲಿ ಕಾರು ಬಡಿದು ಪಾದಚಾರಿ ದುರ್ಮರಣ.

ಭಟ್ಕಳ : ಬೆಂಗ್ರೆಯಲ್ಲಿ ಕಾರು ಬಡಿದು ಪಾದಚಾರಿ ದುರ್ಮರಣ.

Thu, 09 Jun 2022 04:45:43  Office Staff   SO News

ಭಟ್ಕಳ: ಮಂಗಳೂರಿನಿಂದ ಮುಂಬೈ ಕಡೆ ಹೊರಟ ಕಾರೊಂದು ಪಾದಚಾರಿ ಮಹಿಳೆ ರಸ್ತೆ ದಾಟುವ ವೇಳೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಮಾವಿನಕಟ್ಟೆ ಬೆಂಗ್ರೆ ಬಳಿ ನಡೆದಿದೆ.

ಮ್ರತ ಮಹಿಳೆ ಮಾಸ್ತಮ್ಮ ಕುಪ್ಪಯ ನಾಯ್ಕ (60) ಎಂದು ಗುರುತಿಸಲಾಗಿದ್ದು  ಬೆಳಕೆ ಗೊರಟೆಯ ನಿವಾಸಿ ಎಂದು ತಿಳಿದು ಬಂದಿದೆ.

ಮಹಿಳೆಯು ತನ್ನ ಮಗಳ ಮನೆಗೆ ಭಟ್ಕಳದಿಂದ ಬೆಂಗ್ರೆಗೆ ತೆರಳಿದ್ದು ಈ ವೇಳೆ ಟೆಂಪೋ ಇಳಿದು ನಡೆದುಕೊಂಡು ಹೋಗುವಾಗ ಮಂಗಳೂರಿನಿಂದ ಮುಂಬೈ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಢಿಕ್ಕಿ ಹೊಡೆದಿದೆ. 
ಕಾರು ರಭಸದಿಂದ  ಬಡಿದ ಪರಿಣಾಮ ಮಹಿಳೆಯು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಮೃತ ಮಹಿಳೆಯ ದೇಹವನ್ನು ಅಪಘಾತಗೊಳಿಸಿದ ಕಾರಿನಲ್ಲಿಯೇ ತಕ್ಷಣಕ್ಕೆ ಮಹಿಳೆಯನ್ನು ಶಿರಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿನ ವೈದ್ಯರು ಮಹಿಳೆಯನ್ನು ಪರೀಕ್ಷೆ ನಡೆಸಿ ಮ್ರತಪಟ್ಟಿರುವುದು ದೃಢಪಡಿಸಿದ್ದಾರೆ. 

ಆಸ್ಪತ್ರೆಯ ಶವಾಗಾರದಲ್ಲಿ ಮೃತ ದೇಹವನ್ನು ಇರಿಸಲಾಗಿದ್ದು, ಬಳಿಕ ಸರಕಾರಿ ಆಸ್ಪತ್ರೆ‌ ಭಟ್ಕಳಕ್ಕೆ ರವಾನಿಸಲಾಗಿದೆ.

ಈ ಕುರಿತು ಮುರುಡೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


Share: