ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: 'ದೇವರ ಸೇವೆಯಿಂದ ಭಗವಂತನ ದರ್ಶನ' ಸದ್ಯೋಚಾತ ಶಂಕರಾಶ್ರಮ ಸ್ವಾಮಿಜಿ

ಭಟ್ಕಳ: 'ದೇವರ ಸೇವೆಯಿಂದ ಭಗವಂತನ ದರ್ಶನ' ಸದ್ಯೋಚಾತ ಶಂಕರಾಶ್ರಮ ಸ್ವಾಮಿಜಿ

Wed, 11 Jan 2023 06:44:47  Office Staff   so news

ಭಟ್ಕಳ : ಹೃದಯದಲ್ಲಿ ಭಯಭಕ್ತಿ ಇದ್ದಾಗ ಮಾತ್ರ ದೇವರ ಕೃಪೆ ಪಡೆಯಲು ಸಾಧ್ಯ. ಯಾರು ಶೃದ್ಧಾ ಭಕ್ತಿಯಿಂದ ದೇವರ ಸೇವೆ ಮಾಡುತ್ತಾರೋ ಅವರಿಗೆ ದೇವಿ ಪ್ರಸಾದ ರೂಪದಲ್ಲಿ ಒಲಿಯುತ್ತಾಳೆ ಎಂದು ಚಿತ್ರಾಪುರ ಸದ್ಯೋಚಾತ ಶಂಕರಾಶ್ರಮ ಸ್ವಾಮಿಜಿ ಹೇಳಿದರು.
 ಅವರು ಮಂಗಳವಾರ ಆಳ್ವೇಕೋಡಿ ದುರ್ಗಾಪರಮೇಶ್ವರಿ ದೇವಿಯ ಮಾರಿಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ನಂತರ ಭಕ್ತರಿಗೆ ಆಶೀರ್ವಚನ ನೀಡಿದರು. ದೇವರ ಸೇವೆಯಿಂದ ಸಿಗುವ ತೃಪ್ತಿ ಭಗವಂತನ ದರ್ಶನದಷ್ಟೆ ಅನುಭವ ನೀಡುತ್ತದೆ. ಅಳ್ವೇಕೋಡಿ ಜಾತ್ರೆಯಲ್ಲಿ ಸಂಘಟಕರ ಸೇವಾ ಮನೋಭಾವ ನೋಡಿ ಮನತುಂಬಿ ಬಂದಿದೆ. ದೇವಿಯ ಕೃಪೆ ಎಲ್ಲಾ ಸ್ವಯಂ ಸೇವಾ ಕಾರ್ಯಕರ್ತರಿಗೆ ಸಿಗಲಿ ಎಂದು ಶುಭಹಾರೈಸಿದರು.
 ಭಟ್ಕಳ ಶಾಸಕ ಸುನೀಲ ನಾಯ್ಕ ಮಾತನಾಡಿ ಆಳ್ವೇಕೋಡಿ ಮಾರಿ ಜಾತ್ರೆ ಇಡೀ ರಾಜ್ಯಕ್ಕೆ ಮಾದರಿ ಜಾತ್ರೆಯಾಗಿದೆ. ತಾಲ್ಲೂಕಿನ ಎಲ್ಲಾ ಸಮುದಾಯದವರು ನಡೆದುಕೊಳ್ಳವ ಶಕ್ತಿ ಪೀಠ ಇದಾಗಿದೆ. ಇಲ್ಲಿನ ಸಂಘಟಕರ ಅಚ್ಚುಕಟ್ಟಾದ ವ್ಯವಸ್ಥೆ, ಉಟೋಪಚಾರ ವ್ಯವಸ್ಥೆಯಿಂದಾಗಿ ಜಾತ್ರೆಯ ಮೆರಗು ಹೆಚ್ಚಿದೆ ಎಂದರು.
 ಮಾರಿ ಜಾತ್ರಾ ಮಹೋತ್ಸವದ ಅಧ್ಯಕ್ಷ ರಾಮ ಮೊಗೇರ ಮಾತನಾಡಿ ಎರಡು ದಿನದ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿಕೊಂಡರು.
 ಜಾತ್ರಾ ಮಹೋತ್ಸವದಲ್ಲಿ ಅನ್ನದಾನಕ್ಕೆ ಸಹಕಾರ ನೀಡಿದ ದಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಳ್ವೇಕೋಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ನಾರಾಯಣ ದೈಮನೆ ಹಾಗೂ ಆಡಳಿತ ಸಮಿತಿ ಸದಸ್ಯರು ವೇದಿಕೆಯಲ್ಲಿ ಇದ್ದರು.


Share: