ಮಂಗಳೂರು, ಜ.೨: ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ವತಿಯಿಂದ ಮಂಜನಾಡಿಯಲ್ಲಿ ಅಲ್ ಮದೀನಾ ಮಹಿಳಾ ಕಾಲೇಜು ಕಟ್ಟಡದ ಉದ್ಘಾಟನೆ ಜ.೧೨ರಂದು ಸಂಜೆ ೩ ಗಂಟೆಗೆ ನಡೆಯಲಿದೆ.
ಉಳ್ಳಾಲದ ತಾಜುಲ್ ಉಲಮಾ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಅಧ್ಯಕ್ಷತೆಯಲ್ಲಿ ಯುಎಇಯ ಧಾರ್ಮಿಕ ವ್ಯವಹಾರದ ಸಲಹೆಗಾರ ಅಸ್ಸಯ್ಯದ್ ಅಲೀಯುಲ್ ಅಲ್ ಹಾಶಿಮಿ ಅಬುದಾಬಿ ಕಟ್ಟಡವನ್ನು ಉದ್ಘಾಟಿಸುವರು.
ಮಂಜನಾಡಿ ಉಸ್ತಾದ್ ಸಿ.ಪಿ. ಮುಹಮ್ಮದ್ ಕುಂಞಿ ಮುಸ್ಲಿಯಾರ್ ದುವಾ ಆಶೀರ್ವಚನ ನೀಡಲಿರುವರು. ಬದ್ರುಲ್ ಹಿಲಾಲ್ ಅಲ್ ಫಾರಿಸಿ ಅಬುದಾದಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅಂದು ಮಧ್ಯಾಹ್ನ ೧ ಗಂಟೆಯಿಂದ ಬೇಕಲ್ ಉಸ್ತಾದ್ರಿಂದ ಅಧ್ಯಯನ ಶಿಬಿರ ನಡೆಯಲಿದೆ. ಶಿಬಿರವು ‘ಇಸ್ಲಾವಿ ಚರಿತ್ರೆ ಗ್ರಂಥಗಳ ಅಧ್ಯಯನಕ್ಕೊಂದು ಮುನ್ನುಡಿ’ ವಿಷಯದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.