ಬಂಟ್ವಾಳ : ತಾಲೂಕಿನಾದ್ಯಂತ ಸೋಮವಾರ ರಾತ್ರಿ ಗುಡುಗು ಸಹಿತ ಭಾರೀ ಗಾಳಿಮಳೆ ಸುರಿದಿದೆ. ತಡರಾತ್ರಿ ಸುಮಾರು ೨ ಗಂಟೆಯ ವೇಳೆಗೆ ಆರಂಭವಾದ ಮಳೆ ನಿರಂತ ಒಂದುಗಂಟೆಗಳ ಕಾಲ ಸುರಿದಿದ್ದು, ಬಿಸಿಯಾಗಿದ್ದ ವಾತಾವರಣವನ್ನು ತಣ್ಣನೆಗೊಳಿಸಿದೆ. ತಾಲೂಕಿನಲ್ಲಿ ೮.೬ ಮಿಲಿ ಮೀಟರ್ ಮಳೆಯಾಗಿದೆ ಎಂದು ತಾಲೂಕು ಕಛೇರಿ ಪ್ರಕಟಣೆ ತಿಳಿಸಿದೆ.