ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಮೀನು ಮಾರಾಟ ಮಾಡುವ ಮಹಿಳೆಯ ಚಿನ್ನದ ಸರ ಕಿತ್ತು ಪರಾರಿ

ಭಟ್ಕಳ: ಮೀನು ಮಾರಾಟ ಮಾಡುವ ಮಹಿಳೆಯ ಚಿನ್ನದ ಸರ ಕಿತ್ತು ಪರಾರಿ

Thu, 21 Sep 2023 06:04:02  Office Staff   S O News

ಭಟ್ಕಳ: ಬೈಕ್ ಮೇಲೆ  ಬಂದ ಇಬ್ಬರು ವ್ಯಕ್ತಿಗಳು ಮನೆ ಮನೆಗೆ ತೆರಳಿ ಮೀನು ಮಾರಾಟ ಮಾಡುವ ಮಹಿಳೆಯೋರ್ವಳ ಸರಗಳ್ಳತನ ಮಾಡಿ ಪರಾರಿಯಾದ ಘಟನೆ ಶಿರಾಲಿಯ ಸೋನಾರಾಕೇರಿ ಕ್ರಾಸ್ ಸಮೀಪ ನಡೆದಿದೆ. 

ಸರಗಳ್ಳತನವಾದ ಮೀನುಗಾರ ಮಹಿಳೆಯನ್ನು ನಾಗಮ್ಮ ಮಹಾದೇವ ಮೊಗೇರ ಎಂದು ತಿಳಿದು ಬಂದಿದೆ. ಈಕೆ ಎಂದಿನಂತೆ ಶಿರಾಲಿಯ ಅಕ್ಕ ಪಕ್ಕದ  ಗ್ರಾಮದ ಮನೆ ಮನೆಗಳಿಗೆ ಮೀನು ವ್ಯಾಪಾರ ಮಾಡಿಕೊಂಡು ಸೋನಾರಕೇರಿ ಕ್ರಾಸ್‌ ನಿಂದ ರಾಷ್ಟ್ರೀಯ ಹೆದ್ದಾರಿ ಕಡೆಗೆ ಬರುತ್ತಿದ್ದಾಗ ಮುಂದಿನಿಂದ ಬಂದ ಇಬ್ಬರು ಮೋಟಾರ ಸೈಕಲ ಸವಾರರು ಸಮೀಪ ಬಂದು ಏನು ಮೀನು ಇದೆ ಎಂದು ವಿಚಾರಿಸಿದಾಗ ಮೀನು ಮಾರಾಟ ಮಹಿಳೆ ಬಂಗಡೆ ಮೀನು ಎಂದು ಹೇಳಿದ್ದಾಳೆ. ಈ ವೇಳೆ ಮೋಟಾರ ಸೈಕಲ್ ಸವಾರಿ ಹೆಲ್ಮೆಟ್ ಧರಿಸಿದ್ದು. ಹಿಂಬಾಗದಲ್ಲಿ ಕುಳಿತಿದ್ದ ಕಪ್ಪು ಬಣ್ಣದ ಚಹರೆಯುಳ್ಳ ವ್ಯಕ್ತಿ ಒಮ್ಮೆಗೆ ಕೊರಳಿಗೆ ಕೈ ಹಾಕಿ ಕೊರಳಿನಲ್ಲಿದ್ದ ಸುಮಾರು 27 ಗ್ರಾಂ ತೂಕದ 87,000 ಮೌಲ್ಯದ ಬೆಳೆ ಬಾಳುವ ಬಂಗಾರದ ಚೈನ್ ಹರಿದುಕೊಂಡು ನಾಪತ್ತೆಯಾಗಿದ್ದಾರೆ 

ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Chain snatching spree continues: Bhatkal and Honnavar latest targets after Sirsi and Ankola in Uttara Kannada


Share: