ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕರೋಪಾಡಿ: ಸೋಟ ಪ್ರಕರಣ: ಇಬ್ಬರು ಪೊಲೀಸ್ ವಶಕ್ಕೆ

ಕರೋಪಾಡಿ: ಸೋಟ ಪ್ರಕರಣ: ಇಬ್ಬರು ಪೊಲೀಸ್ ವಶಕ್ಕೆ

Fri, 18 Dec 2009 04:14:00  Office Staff   S.O. News Service
ಬಂಟ್ವಾಳ, ಡಿ.೧೭: ತಾಲೂಕಿನ ಕರೋಪಾಡಿ ಗ್ರಾಮದ ಪಾದೆಕಲ್ಲು ಎಂಬಲ್ಲಿ ಮಂಗಳವಾರ ರಾತ್ರಿ ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ನಡೆದ ಸೋಟ ಪ್ರಕರಣಕ್ಕೆ ಸಂಬಂಽಸಿ ವಿಚಾರಣೆಗಾಗಿ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
15909.jpg

ಜಮೀನಿನ ಮಾಲಕ ಮೊಯ್ದು ಕುಂಞಿ ಮತ್ತು ಅಬ್ದುಲ್ಲಾ ಎಂಬವರೇ ಪೊಲೀಸ್ ವಶದಲ್ಲಿರುವವರು. ಪ್ರಮುಖ ಆರೋಪಿ ಮುಹಮ್ಮದ್ ಎಂಬಾತ ತಲೆಮರೆಸಿಕೊಂಡಿದ್ದು ಆತನಿಗಾಗಿ ತೀವ್ರ ಶೋಧ ಮುಂದು ವರಿಸಿರುವುದಾಗಿ ಬಂಟ್ವಾಳ ವೃತ್ತ ನಿರೀಕ್ಷಕ ನಂಜುಂಡೆ ಗೌಡ ತಿಳಿಸಿದ್ದಾರೆ.

ಉಸ್ತುವಾರಿ ಸಚಿವರ ಭೇಟಿ: ಘಟನಾ ಸ್ಥಳಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೇಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಅಕ್ರಮ ಪಟಾಕಿ ಘಟಕ ಮತ್ತು ಭಯೋತ್ಪಾದಕರ ನಡುವೆ ಸಂಬಂಧ ಇದೆಯೇ ಎಂಬುದರ ಬಗ್ಗೆ ಕೂಲಂಕುಶ ತನಿಖೆಗೆ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಪಟಾಕಿ ತಯಾರಿಕಾ ಘಟಕ: ಎಸ್ಪಿ
15909_4.jpg
ಜಿಲ್ಲಾ ಪೊಲೀಸ್ ನಿರೀಕ್ಷಕ ಡಾ.ಸುಬ್ರಹ್ಮಣೇಶ್ವರ ರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾರ್ಕೋಲ್ ಮತ್ತು ಸಲರ್ ರಾಸಾಯನಿಕಗಳು ಘಟನಾ ಸ್ಥಳದಲ್ಲಿ ದೊರೆತಿರು ವುದರಿಂದ ಇದೊಂದು ಪಟಾಕಿ ತಯಾರಿಕಾ ಘಟಕವೆಂದು ಸ್ಪಷ್ಟವಾಗುತ್ತದೆ. 

ಬಾಂಬ್‌ಗಳ ತಯಾರಿಕೆಗೆ ನೈಟ್ರೇಟ್ ಅಗತ್ಯವಿದ್ದು ಅಂತಹ ಯಾವುದೇ ರಾಸಾಯನಿಕಗಳು ಇಲ್ಲಿ ಪತ್ತೆಯಾಗಿಲ್ಲ ಎಂದು ತಿಳಿಸಿದರು. ಘಟನೆಯ ಕುರಿತ ತನಿಖೆಗೆ ವಿಶೇಷ ತಜ್ಞರ ತಂಡವನ್ನು ಕರೆಸಲಾಗುವುದು ಎಂದು ತಿಳಿಸಿದರು.

Share: