ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ನೇತ್ರಾಣಿ ದ್ವೀಪದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

ಭಟ್ಕಳ: ನೇತ್ರಾಣಿ ದ್ವೀಪದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

Tue, 25 Apr 2023 02:06:21  Office Staff   SOnews

ಭಟ್ಕಳ: ಕರ‍್ನಾಟಕ ವಿಧಾನ ಸಭಾ ಚುನಾವಣೆ-೨೦೨೩ರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಸ್ವೀಪ್  ಕರ‍್ಯಕ್ರಮ ಇಂದು ದೇಶದ ೭ನೇ ಅದ್ಭುತ ಪಾರಂಪರಿಕ ಸ್ಥಳಗಳಲ್ಲೊಂದಾದ ನೇತ್ರಾಣಿ ನಡುಗುಡ್ಡೆಯಲ್ಲಿ ನಡೆಸಿ ಗಮನ ಸೆಳೆಯಲಾಯಿತು.

ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತಾಲ್ಲೂಕು ಪಂಚಾಯತ ಭಟ್ಕಳ, ಮಾವಳ್ಳಿ-೧ ಹಾಗೂ ಮಾವಳ್ಳಿ-೨ ಗ್ರಾಮ ಪಂಚಾಯತ ಮತ್ತು ಸ್ಕೂಬಾ ಡೈವಿಂಗ್ ಅಡ್ವೆಂಚರ್ ಕ್ಲಬ್ ರವರ ಸಹಯೋಗದಲ್ಲಿ ಮುರುಡೇಶ್ವರ ಕಡಲ ಕಿನಾರೆಯಲ್ಲಿ ಕರ‍್ಯಕ್ರಮ ಆರಂಭಗೊಂಡಿತು.

ಸ್ಥಳೀಯರು ಮತ್ತು ಕಛೇರಿ ಸಿಬ್ಬಂದಿಗಳೊಂದಿಗೆ ನೇತ್ರಾಣಿ ನಡುಗುಡ್ಡೆಗೆ ತೆರಳಿ, ಸ್ಕೂಬಾ ಡೈವಿಂಗ್ ಮೂಲಕ ಸಮುದ್ರದಲ್ಲಿನ ಅಮೂಲ್ಯ, ಅಪರೂಪದ ಹವಳ, ಜಲ-ಚರಗಳ ನಡುವೆ ಜಾಗೃತಿ ಭಿತ್ತಿ ಪತ್ರ ಪ್ರರ‍್ಶಿಸಿ ಗಮನ ಸೆಳೆಯಲಾಯಿತು.

ಈ ಸಂರ‍್ಭದಲ್ಲಿ ತಾಲೂಕಾ ಪಂಚಾಯತ ಕರ‍್ಯನರ‍್ವಹಣಾಧಿಕಾರಿ ಪ್ರಭಾಕರ ಚಿಕ್ಕನ್ಮನೆ, ತಾಲೂಕಾ ಪಂಚಾಯತ ಸಹಾಯಕ ನರ‍್ದೇಶಕರಾದ ನಾಗರಾಜ ನಾಯ್ಕ, ಗ್ರಾಮ ಪಂಚಾಯತ ಕರ‍್ಯರ‍್ಶಿ ಮಾರುತಿ ದೇವಾಡಿಗ ಹಾಗೂ ಸಿಬ್ಬಂದಿಗಳು, ಸ್ಕೂಬಾ ಡೈವಿಂಗ್ ಅಡ್ವೆಂಚರ್ ಕ್ಲಬ್  ಸಿಬ್ಬಂದಿಗಳು ಹಾಜರಿದ್ದರು.

 


Share: