ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ನಿಯಂತ್ರಣ ತಪ್ಪಿದ ಕಾರು ಪಲ್ಟಿ. ಓರ್ವ ವಿಧ್ಯಾರ್ಥಿ ಸಾವು, ನಾಲ್ವರಿಗೆ ಗಾಯ,ಇಬ್ಬರ ಸ್ಥಿತಿ ಗಂಭೀರ

ಭಟ್ಕಳ: ನಿಯಂತ್ರಣ ತಪ್ಪಿದ ಕಾರು ಪಲ್ಟಿ. ಓರ್ವ ವಿಧ್ಯಾರ್ಥಿ ಸಾವು, ನಾಲ್ವರಿಗೆ ಗಾಯ,ಇಬ್ಬರ ಸ್ಥಿತಿ ಗಂಭೀರ

Sat, 24 Sep 2022 18:24:56  Office Staff   S O News

ಭಟ್ಕಳ: ತಾಲೂಕಿನ ಮೂಡಭಟ್ಕಳ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಪಲ್ಟಿಯಾದ ಪರಿಣಾಮ ಯುವಕ ಸಾವನ್ನಪ್ಪಿದ್ದು, ಆತನ ನಾಲ್ವರು ಸ್ನೇಹಿತರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಇಬ್ಬರು ಯುವಕರು ಗಂಭೀರವಾಗಿ ಅವರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಶುಕ್ರವಾರ ತಡರಾತ್ರಿ 2:00ರ ಸುಮಾರಿಗೆ ಮೋಗ್ಲಿ ಹೊಂಡಾ ಮಸೀದಿ ಸುಹೈಬ್ ರೂಮಿ ಬಳಿ ಅಪಘಾತ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಮುಹಮ್ಮದ್ ಉನೈಸ್ ತಂದೆ ಮುಹಮ್ಮದ್ ಅಮ್ಜದ್ ಖತೀಬ್ (20) ರಂಗಿನಕಟ್ಟೆ ನಿವಾಸಿ ಎಂದು ಗುರುತಿಸಲಾಗಿದೆ.

ಗಾಯಗೊಂಡಿದ್ದ ಮುಹಮ್ಮದ್ ಫುರ್ಖಾನ್  ತಂದೆ ಮುಹಮ್ಮದ್ ಅಲಿ ಬಾಷಾ ಗಂಗಾವಳಿ, ಮುಹಮ್ಮದ್ ಸುಹೇಲ್ ತಂದೆ  ಸಿರಾಜ್ ಗೋಲಿವಲೆ, ಸೈಯದ್ ಇಸ್ಮಾಯಿಲ್ ತಂದೆ ಸೈಯದ್ ಇಬ್ರಾಹಿಂ ಲಂಕಾ ಮತ್ತು ಅಬ್ದುಲ್ ರೆಹಮಾನ್ ತಂದೆ ಅಬ್ದುಲ್ ಬಾಸಿತ್ ಆಕ್ರಮಿ, ಅಪಘಾತದಲ್ಲಿ ಗಾಯಗೊಂಡ ಮೊದಲ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು,ಮಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇವರು ಎಲ್ಲರು ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಆಗಿದ್ದು ಗೆಳೆಯರು ತಡರಾತ್ರಿ ಪರೀಕ್ಷೆಗೆ ತಯಾರಿ ಮುಗಿಸಿ ಟೀ ಕುಡಿಯಲು ಮನೆಯಿಂದ ಹೊರಟಿದ್ದು ಶಿರೂರ್ ಚೆಕ್ ಪೋಸ್ಟ್ ಬಳಿಯ ಟಿ ಸ್ಟಾಲ್‌ನಲ್ಲಿ ಚಹಾ ಕಡಿದು ಹಿಂತಿರುಗಿ ಭಟ್ಕಳ ಕಡೆಗೆ ಬರುವಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಕಾರಿನಿಂದ ಜಿಗಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಕಾರು ಚಲಾಯಿಸುತ್ತಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಆದರೆ ಉಳಿದ ಇಬ್ಬರು ಬಾಲಕರು ಕಾರಿನೊಳಗೆ ಉಳಿದುಕೊಂಡಿದ್ದರಿಂದ ಸುರಕ್ಷಿತವಾಗಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.

ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮುಹಮ್ಮದ್ ಉನೈಸ್ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಮಧ್ಯಾಹ್ನದ ಪ್ರಾರ್ಥನೆಯ ನಂತರ ನವಾಯತ್ ಕಾಲೋನಿ ತಂಜಿಮ್ ಜುಮಾ ಮಸೀದಿಯಲ್ಲಿ ಅಂತ್ಯಕ್ರಿಯೆ ಪ್ರಾರ್ಥನೆ ನಡೆಯಲಿದೆ.

ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: