ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವಿಟ್ಲ: ಅಡ್ಕಸ್ಥಳ ಉರೂಸ್‌ಗೆ ಚಾಲನೆ

ವಿಟ್ಲ: ಅಡ್ಕಸ್ಥಳ ಉರೂಸ್‌ಗೆ ಚಾಲನೆ

Tue, 09 Feb 2010 00:22:00  Office Staff   S.O. News Service

ವಿಟ್ಲ,ಫೆ.೮: ಕರ್ನಾಟಕ-ಕೇರಳದ ಗಡಿ ಪ್ರದೇಶದಲ್ಲಿರುವ ಅಡ್ಕಸ್ಥಳದ ಬಹು:ಮಶ್ಹೂರ್ ವಲಿಯುಲ್ಲಾಹಿ (ರ.ಅ)ದರ್ಗಾ ಶರೀಫ್‌ನಲ್ಲಿ ಎರಡು ವರ್ಷಗಳಿಗೊಮ್ಮೆ ಆಚರಿಸಿಕೊಂಡು ಬರುವ ಉರೂಸು ಸಮಾರಂಭದ ವಿವಿಧ ಕಾರ್ಯಕ್ರಮಗಳಿಗೆ ರವಿವಾರ ರಾತ್ರಿ ಚಾಲನೆ ನೀಡಲಾಯಿತು.

 

ಉರೂಸು ಕಮಿಟಿಯ ಅಧ್ಯಕ್ಷ ಯು.ಕೆ.ಮೀರ್ ಝಾಹಿದ್ ತಂಙಳ್ ಅಲ್‌ಬುಖಾರಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದರು. ಅಸಯ್ಯದ್ ಕೆ.ಎಸ್.ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ದ್ಸಿಕ್ರ್ ಹಲ್ಕಾ ಕಾರ್ಯಕ್ರಮ ನಡೆಯಿತು.

 

ಮರ್ತ್ಯ ಮುದರ್ರಿಸ್ ಪಿ.ಕೆ.ಅಬೂಬಕರ್ ಮುಸ್ಲಿಯಾರ್ ಧಾರ್ಮಿಕ ಪ್ರವಚನವನ್ನು ಉದ್ಘಾಟಿಸಿದರು..ಎ.ಪಿ.ಅಬ್ದುಲ್ ಹಮೀದ್ ಫೈಝಿ ಅಡ್ಯನಡ್ಕ ಪ್ರವಚನ ನೀಡಿದರು...

ಫೆ.೧೦ರ ತನಕ ನಡೆಯುವ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳಲ್ಲಿ ಅಬ್ದುಸಲಾಮ್ ದಾರಿಮಿ ಆಲಂಬಾಡಿ,ಎಂ.ಎ.ಕಾಸಿಮ್ ಮುಸ್ಲಿಯಾರ್ ತಾಯಲಂಗಾಡಿ, ಕೆ.ಪಿ.ಹುಸೈನ್ ಸಹದಿ ಕೆ.ಸಿ.ರೋಡ್ ಪ್ರವಚನ ನೀಡಲಿದ್ದಾರೆ.

 

ಫೆ.೧೧ರಂದು ಅಸಯ್ಯದ್ ಮುನೀರುಲ್ ಅಹದುಲ್ ತಂಙಳ್ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದ್ದು, ಎಸ್.ಎ.ಅಬ್ದುಲ್ ಹಮೀದ್ ಲತೀಫಿ ಪ್ರವಚನ ನೀಡಲಿರುವರು.

ಫೆ.೧೨ರಂದು ನಡೆಯಲಿರುವ ಸೌಹಾರ್ದ ಸಮಾವೇಶದಲ್ಲಿ ಮೌಲಾನ ಅಬುಸೂಫಿಯಾನ್ ಎಚ್.ಐ.ಇಬ್ರಾಹಿಂ ಮದನಿ ಪ್ರಧಾನ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಶಾಸಕ ಸಿ.ಎಚ್.ಕುಂಞಂಬು, ಬಂmಳ ಶಾಸಕ ಬಿ.ರಮಾನಾಥ ರೈ, ಮಂಜೇಶ್ವರ ಮಾಜಿ ಶಾಸಕ ಚೆರ್ಕಳಂ ಅಬ್ದುಲ್ಲ ,ದ.ಕ.ಜಿ.ಪಂ ಉಪಾಧ್ಯಕ್ಷ ಎಚ್.ಜಗನ್ನಾಥ ಸಾಲಿಯಾನ್ ಮತ್ತಿತರ ಗಣ್ಯರು ಭಾಗವಹಿಸುವರು.

 

ಫೆ.೧೩ರಂದು ಉರೂಸ್‌ನ ಸಮಾರೋಪ ಸಮಾರಂಭ ಉಳ್ಳಾಲದ ಬಹು.ಶೈಖುನಾ ತಾಜುಲ್ ಉಲಮಾ ಅಸಯ್ಯದ್‌ಅಬ್ದುರ್ರಹಿಮಾನ್ ಕುಂಞಿಕೋಯ ತಂಙಳ್ ಅಲ್‌ಬುಖಾರಿ ಅಧ್ಯಕ್ಷತೆಯಲ್ಲಿ ನಡಯಲಿದೆ.ಲುಕ್ಮಾನುಲ್ ಹಕೀಂ ಅಲ್‌ಖಾಮಿಲ್ ಪ್ರವಚನ ನೀಡುವರು. ಫೆ.೧೪ರಂದು ಬೆಳಗ್ಗೆ ಕೂಟ ಝೀಯಾರತ್ ಕಾರ್ಯಕ್ರಮ ನಡೆಯಲಿದೆ.


Share: