ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ದನ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಆಟೋ ಪಲ್ಟಿ: ಚಾಲಕ ಸಾವು

ಭಟ್ಕಳ: ದನ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಆಟೋ ಪಲ್ಟಿ: ಚಾಲಕ ಸಾವು

Thu, 30 Nov 2023 06:50:42  Office Staff   S O News

ಭಟ್ಕಳ: ರಸ್ತೆಗೆ ಅಡ್ಡ ಬಂದ ದನ ತಪ್ಪಿಸಲು ಹೋದ ಆಟೋರಿಕ್ಷಾ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಹಿನ್ನೆಲೆ  ಗಂಭೀರವಾಗಿ ಗಾಯಗೊಂಡು ಆಟೋ ಚಾಲಕ ಸಾವನಪ್ಪಿರುವ ಘಟನೆ ಮಾರುಕೇರಿ ಕೋಟಖಂಡದಲ್ಲಿ ನಡೆದಿದೆ.

ಮೃತ ಆಟೋ ಚಾಲಕನನ್ನು ನಾಗೇಶ ಕೃಷ್ಣ ಗೊಂಡ ಎಂದು ತಿಳಿದು ಬಂದಿದೆ. ಈತ ಭಟ್ಕಳ ಕಡೆಯಿಂದ ಮಾರುಕೇರಿ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಆಟೋ ಚಲಾಯಿಸಿಕೊಂಡು ಬಂದವನು ಕೊಟಖಂಡ ಸಮೀಪ ರಸ್ತೆಗೆ ದನ ಅಡ್ಡ ಬಂದ ಹಿನ್ನೆಲೆ ದನವನ್ನು ತಪ್ಪಿಸಲು ಹೋಗಿ  ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ .

ಅಪಘಾತದಲ್ಲಿ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ವೇಳೆ ಗೊರಟೆ ಕ್ರಾಸ್ ಸಮೀಪ ಸಾವನ್ನಪ್ಪಿದ್ದಾನೆ. ಆಟೋ ಹಿಂಬದಿಯಲ್ಲಿದ್ದ ನಾಗರಾಜ ನಾಯ್ಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ವಿಷಯವನ್ನು ತಿಳಿದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ನೂರಾರು ಜನರು ಮೃತನ ಅಂತಿಮ ದರ್ಶನ ಪಡೆದುಕೊಂಡರು ಹಾಗೂ ಭಟ್ಕಳ ಆಟೋ ಚಾಲಕರ ಸಂಘದಿಂದ ಸಂತಾಪ ಸೂಚಿಸಲಾಯಿತು.
ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಗಾಯಾಳು ನಾಗರಾಜ್ ನಾಯ್ಕ ದೂರು ನೀಡಿದ್ದು ಪ್ರಕರಣವನ್ನು ದಾಖಲಿಸಿ ಕೊಂಡ ಸಿ.ಪಿ.ಐ ಚಂದನಗೋಪಾಲ ವಿ, ತನಿಖೆ ಕೈಗೊಂಡಿದ್ದಾರೆ.


Share: