ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಡಿವೈಎಸ್‌ಪಿ ಕೆಯು ಬೆಳ್ಳಿಯಪ್ಪ ಕುಂದಾಪುರಕ್ಕೆ ವರ್ಗಾವಣೆ

ಭಟ್ಕಳ: ಡಿವೈಎಸ್‌ಪಿ ಕೆಯು ಬೆಳ್ಳಿಯಪ್ಪ ಕುಂದಾಪುರಕ್ಕೆ ವರ್ಗಾವಣೆ

Fri, 30 Dec 2022 06:49:41  Office Staff   so news

ಭಟ್ಕಳ: ಭಟ್ಕಳ ಡಿವಾಯ್‌ ಎಸ್ಪಿ ಕೆ.ಯು. ಬೆಳ್ಳಿಯಪ್ಪರನ್ನು ಕುಂದಾಪುರಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಕಳೆದ ಒಂದು ವರ್ಷ 10 ತಿಂಗಳುಗಳಿಂದ ಡಿವಾಯ್‌ಎಸ್ಪಿಯಾಗಿ ಕೆಲಸ ಮಾಡಿಕೊಂಡಿದ್ದ ಅವರು, ಪೊಲೀಸ್‌ ವಲಯದಲ್ಲಿ ಎಲ್ಲರ ಪ್ರೀತಿ, ವಿಶ್ವಾಸವನ್ನು ಸಂಪಾದಿಸಿಕೊಂಡಿದ್ದರು. ಇದೀಗ ಬೆಳ್ಳಿಯಪ್ಪ ಜಾಗಕ್ಕೆ ಕುಂದಾಪುರದಿಂದ ಶ್ರೀಕಾಂತ ಕೆ. ಅವರನ್ನು ವರ್ಗಾವಣೆ ಮಾಡಲಾಗಿದ್ದು, ಒಂದೆರಡು ದಿನಗಳಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಶ್ರೀಕಾಂತ ಈ ಹಿಂದೆ ಕುಮಟಾ ಸಿಪಿಐ, ನಂತರ ಜಿಲ್ಲಾ ಎಸಿಬಿಯಲ್ಲಿ ಡಿವಾಯ್‌ ಎಸ್ಪಿ ಆಗಿ ಕೆಲಸ ನಿರ್ವಹಿಸಿದ್ದರು.


Share: