ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಸುರತ್ಕಲ್:ಶಿಕ್ಷಣದ ಮೂಲಕ ಮಕ್ಕಳಿಗೆ ಮಾರ್ಗದರ್ಶನ ನೀಡಿ:ನಳಿನ್

ಸುರತ್ಕಲ್:ಶಿಕ್ಷಣದ ಮೂಲಕ ಮಕ್ಕಳಿಗೆ ಮಾರ್ಗದರ್ಶನ ನೀಡಿ:ನಳಿನ್

Tue, 17 Nov 2009 03:02:00  Office Staff   S.O. News Service
ಸುರತ್ಕಲ್, ನವೆಂಬರ್ 16: ಸಮಾಜ ಸಂಘಟನೆಗಳು ಜಾತಿ ಮತ ಪಂಗಡಗಳಿಗೆ ಸೀಮಿತವಾಗದೆ ದೀನದಲಿತರ ಕಣ್ಣೀರೊರೆಸುವ ಸಂಘಟನೆಯಾಗಿ ರೂಪುಗೊಳ್ಳಬೇಕು, ಶಿಕ್ಷಣದ ಮೂಲಕ ಮಕ್ಕಳಿಗೆ ಮಾರ್ಗದರ್ಶನ ನೀಡಿ, ಸ್ಪರ್ಧಾ ಮನೋಭಾವಕ್ಕೆ ಉತ್ತೇಜನ ಡುವ ಸಂಘಟನೆಯಾಗಬೇಕು ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಸುರತ್ಕಲ್ ಬಂಟರ ಸಂಘದ ವತಿಯಿಂದ ಬಂಟರ ಭವನದಲ್ಲಿ ಗ್ರಂಥಾಲಯ ಉದ್ಘಾಟನೆ, ಅಭಿನಂದನಾ ಸಮಾರಂಭ, ಹೊಲಿಗೆಯಂತ್ರ ವಿತರಣೆ ಪ್ರಮಾಣ ಪತ್ರ, ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
15sur5.jpg
15sur7.jpg 
ಗ್ರಂಥಾಲಯ ಉದ್ಘಾಟಿಸಿ, ಸಚಿವ ಕೃಷ್ಣ ಪಾಲೆಮಾರ್, ತುಳು ಸಂಸ್ಕೃತಿಯನ್ನು ಮರೆಯುತ್ತಿರುವ ಈ ಕಾಲದಲ್ಲಿ ಪೂರ್ವಜರ ಸಂಪ್ರದಾಯ, ಪದ್ಧತಿಗಳಿಗೆ ಮಣೆಹಾಕಬೇಕಾದ ಅವಶ್ಯಕತೆ ಇದೆ. ಇತರ ಸಮಾಜಕ್ಕೆ ಮುಂದಾಳತ್ವ ಡಬೇಕಾದ ಬಂಟ ಸಮಾಜ ತನ್ನ ಜವಾಬ್ದಾರಿಯನ್ನು ಮರೆಯಬಾರದು ಎಂದರು.
 
ಸಂಸದ ನಳಿನ್ ಕುಮಾರ್ ಕಟೀಲು, ಸಾಹಿತಿ ಡಾ.ಎಳತ್ತೂರು ಗುತ್ತು ಇಂದಿರಾ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು. ಹೊಲಿಗೆ ಯಂತ್ರ, ಕನ್ನಡಕಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
15sur6.jpg
 
ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಎಂ.ದೇವಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್ ರಜ ದುಗ್ಗಣ್ಣ, ಸ್ಪರ್ಧಾತ್ಮಕ ಪರೀಕ್ಷೆಯ ತರಬೇತುದಾರ ಪ್ರಕಾಶ್ ಮೂಡಿತ್ತಾಯ, ಸುರತ್ಕಲ್ ಬಂಟರ ಮಹಿಳಾ ವೇದಿಕೆಯ ಅಧ್ಯಕ್ಷೆ ಪುಷ್ಪ ಬಿ.ಶೇಣವ, ಸುರತ್ಕಲ್ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಆರ್ ಶೆಟ್ಟಿ, ಉಪಾಧ್ಯಕ್ಷ ಎಂ.ಜೆ.ಶೆಟ್ಟಿ ಉಪಸ್ಥಿತರಿದ್ದರು.
ಶ್ರೀಧರ ಶೆಟ್ಟಿ ಮದ್ಯ, ಸುಧಾರಾಣಿ ಶೆಟ್ಟಿ ಅಭಿನಂದನಾ ಪತ್ರ ಓದಿದರು. ಜ್ಯೋತಿ ಶೆಟ್ಟಿ ಕುತ್ತೆತ್ತೂರು, ದೀಪಾ ಶೆಟ್ಟಿ ಕೃಷ್ಣಾಪುರ ಕಾರ್ಯಕ್ರಮ ನಿರ್ವಹಿಸಿದರು.
 

Share: