ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಕೆಯುಡಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಅಂಜುಮನ್ ವಿದ್ಯಾರ್ಥಿ ಸೈಯದ್ ಜಾಸಿಂ ಎಸ್.ಕೆ

ಭಟ್ಕಳ: ಕೆಯುಡಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಅಂಜುಮನ್ ವಿದ್ಯಾರ್ಥಿ ಸೈಯದ್ ಜಾಸಿಂ ಎಸ್.ಕೆ

Tue, 31 May 2022 04:05:12  Office Staff   SO News

ಭಟ್ಕಳ: ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಕ್ರಿಕೆಟ್ ತಂಡಕ್ಕೆ ಭಟ್ಕಳದ ವಿದ್ಯಾರ್ಥಿಯೋರ್ವ ಆಯ್ಕೆಯಾಗಿದ್ದಾನೆ.

ಇಲ್ಲಿನ  (ಎಐಎಂಸಿಎ) ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್‌ನ ಅಂತಿಮ ವರ್ಷದ ವಿದ್ಯಾರ್ಥಿ ಸೈಯದ್ ಜಾಸಿಂ S/o  ಅಬ್ದುಲ್ ಜಮೀ ಎಸ್‌ಕೆ ಆಯ್ಕೆಯಾದ ವಿದ್ಯಾರ್ಥಿಗಳು.

ಸೈಯದ್ ಜಾಸಿಮ್ ಭಟ್ಕಳ ಲಬ್ಬೈಕ್ ನವಾಯತ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಜೂನ್ 6 ರಿಂದ ಜೂನ್ 15, 2022 ರವರೆಗೆ ತಮಿಳುನಾಡಿನ ಹಿಂದೂಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸೈನ್ಸ್, ಚೆನ್ನೈನಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ. ದೈಹಿಕ ನಿರ್ದೇಶಕ ಮೋಹನ್ ಮೆಸ್ತಾ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. 

ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾದ ಜಾಸಿಂ ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಲಿ ಎಂದು ಭಟ್ಕಳ ಮುಸ್ಲಿಂ ಯೂಥ್  ಫೆಡರೇಶನ್ ಹಾಗೂ ಕಾಲೇಜು ಆಡಳಿತ ಮಂಡಳಿಗಳು, ಕ್ರೀಡಾ ಕ್ಲಬ್‌ಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ.


Share: